ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೃಹಲಕ್ಷ್ಮೀ, ಶಕ್ತಿ ಯೋಜನೆ ಸೇರಿ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಒದಗಿಸಲಾಗದೆ ಕಾಂಗ್ರೆಸ್ ಸರ್ಕಾರ ದಿವಾಳಿಯಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಲೇವಡಿ ಮಾಡಿದರು.
ಗೃಹಲಕ್ಷ್ಮೀ ಯೋಜನೆಗೆ ಪ್ರತಿ ತಿಂಗಳು 2800 ಕೋಟಿ ಹಣ ಕೊಡಬೇಕು. ಶಕ್ತಿ ಯೋಜನೆಗೆ ಹಣ ಸಾಲುತ್ತಿಲ್ಲ. ಸಾರಿಗೆ ನೌಕರರಿಗೆ ವೇತನ ನೀಡದ ಅವರು, ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಈ ಸರ್ಕಾರದಲ್ಲಿ ಕೇವಲ ಲೂಟಿ ನಡೆಯುತ್ತಿದೆ. ಒಂದು ರೀತಿಯ ತುಘಲಕ್ ಆಡಳಿತ ನಡೆಸಲಾಗುತ್ತಿದೆ ಎಂದು ಕಿಡಿ ಕಾರಿದರು.
ಕೋಲಾರದಲ್ಲಿ 21 ಎಕರೆ ಕೆರೆ ಜಮೀನನ್ನು ಒತ್ತುವರಿ ಮಾಡಲಾಗಿದೆ ಎಂದು ಕಂದಾಯ ಸಚಿವರೇ ಹೇಳಿದ್ದಾರೆ. ಇನ್ನೂ ಪೊಲೀಸರೇ ಕಳ್ಳರಾಗಿದ್ದಾರೆ. ನಾನು ನಾನು ಸಾರಿಗೆ ಸಚಿವನಾಗಿದ್ದಾಗ ಕೆಎಸಾರ್ಟಿಸಿ, ಬಿಎಂಟಿಸಿ ಲಾಭದಲ್ಲಿತ್ತು. 1 ಸಾವಿರ ಎಕರೆ ಭೂಮಿನಿಗಮಕ್ಕೆ ಖರೀದಿ ಮಾಡಿದ್ದೆ ಎಂದರು.

