March 25, 2026
Wednesday, March 25, 2026
spot_img

ಅಮೆರಿಕ ಜೊತೆ ಯಾವುದೇ ಮಾತುಕತೆಯೂ ಇಲ್ಲ: ಟ್ರಂಪ್‌ಗೆ ಇರಾನ್ ತಿರುಗೇಟು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಒಂದೆಡೆ ತಾರಕ್ಕೇರಿದ್ದು, ಹಾರ್ಮುಜ್ ಜಲಸಂಧಿನಲ್ಲಿ ಹಡಗುಗಳ ಸಂಚಾರ ಸ್ಥಗಿತಗೊಂಡು ಜಗತ್ತಿಗೆ ದೊಡ್ಡ ಹೊಡೆತ ಬಿದ್ದಿದೆ. ಇದರ ನಡುವೆ ಅಮೆರಿಕ ಅಧ್ಯಕ್ಷ ಟ್ರಂಪ್ ಕದನ ವಿರಾಮ, ಸಂಧಾನದ ಜಪ ಮಾಡುತ್ತಿದ್ದರೆ, ಇರಾನ್ ಯಾವುದೇ ಒಪ್ಪಂದವೂ ಇಲ್ಲ, ಮಾತುಕತೆಯೂ ಇಲ್ಲ ಎಂದು ತಿರುಗೇಟು ನೀಡಿದೆ.

ಇತ್ತೀಚೆಗೆ ಟ್ರಂಪ್, ಇರಾನ್ ಜೊತೆ ಉತ್ತಮ ರೀತಿಯಲ್ಲಿ ಮಾತುಕತೆ ನಡೆದಿದ್ದು, ಹಾಗಾಗಿ ಕದನ ವಿರಾಮ ಘೋಷಿಸಲಾಗಿದ್ದು ಎಂದು ಹೇಳಿಕೊಂಡಿದ್ದರು. ಆದರೆ ಇರಾನ್ ಸೇನೆಯ ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಇಬ್ರಾಹಿಂ ಜೊಲ್ಫಾಘರಿ , ಅಮೆರಿಕ ಸ್ವಯಂ ಮಾತುಕತೆ ನಡೆಸುತ್ತಿದೆ ಎಂದು ಲೇವಡಿ ಮಾಡಿದೆ.

ಈ ಕುರಿತು ದೂರದರ್ಶನ ನೀಡಿದ ಹೇಳಿಕೆಯಲ್ಲಿ ಜೊಲ್ಫಾಘರಿ, ಅಂತಹ ರಾಷ್ಟ್ರದ ಜೊತೆ ನಾವು ಇಂದಿಗೂ ಒಪ್ಪಂದ ಮಾಡಿಕೊಳ್ಳಲು ಬಯಸುವುದಿಲ್ಲ. ಇಂದಿಗೂ, ಮುಂದೆಗೂ ಇಲ್ಲ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

ಇದಕ್ಕೂ ಮುನ್ನ ಅಮೆರಿಕವು ಇರಾನ್‌ ಗೆ 15 ಅಂಶಗಳ ಶಾಂತಿ ಪ್ರಸ್ತಾವನೆಯನ್ನು ಕಳುಹಿಸಿದ್ದು, ಆದರೆ ಯಾವುದೇ ಪ್ರಸ್ತಾವನೆಗೆ ಇರಾನ್ ಒಪ್ಪಿಗೆ ನೀಡಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !