ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕೊರಿಯಾದಲ್ಲಿ ಕ್ರೈಸ್ತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇದ್ದು, ಬೈಬಲ್ ಜೊತೆ ಕಾಣಿಸಿಕೊಂಡವರಿಗೆ ಕಠಿಣ ಶಿಕ್ಷೆ ನೀಡಲಾಗುತ್ತಿದೆ.
ಯಾರ ಮನೆಯಲ್ಲಿ ಬೈಬಲ್ ಇರುತ್ತದೋ ಅವರು ಸಂಪೂರ್ಣ ಕುಟುಂಬಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತಿದೆ. ಅಮೆರಿಕದ ಸರ್ಕಾರಿ ಇಲಾಖೆಯ ಸರ್ವೆ ಪ್ರಕಾರ ಕೊರಿಯಾದಲ್ಲಿ ಈಗಾಗಲೇ ೭೦ ಸಾವಿರ ಕ್ರೈಸ್ತರು ಜೈಲಿನಲ್ಲಿದ್ದಾರೆ.
ಕುಟುಂಬವೊಂದರ ಜೊತೆ ಬೈಬಲ್ ಇರುವ ಕಾರಣ ಅವರ ಎರಡು ವರ್ಷದ ಮಗುವಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎನ್ನುವ ವರದಿಯಾಗಿದೆ. ಈ ರೀತಿ ಬಂಧನಕ್ಕೊಳಗಾದ ಕ್ರಿಶ್ಚಿಯನ್ನರಿಗೆ ಜೈಲಿನಲ್ಲಿ ದೈಹಿಕ ಹಿಂಸೆ ನೀಡಲಾಗುತ್ತಿದೆ ಎನ್ನಲಾಗಿದೆ.