ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಹೊರವಲಯದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿಯೂ ನೀರಿನ ಸಮಸ್ಯೆ ಎದುರಾಗಿದೆ. ಈ ಉದ್ಯಾನವನದಲ್ಲಿ ಪ್ರಾಣಿಪಕ್ಷಿಗಳಿಗೆ ಅನುಕೂಲವಾಗುವಂತೆ ಒಟ್ಟಾರೆ ಎಂಟು ಬೋರ್‌ವೆಲ್‌ಗಳಿವೆ.
ಇದರಲ್ಲಿ ಆರು ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ಟ್ಯಾಂಕರ್ ಮೂಲಕ ನೀರು ಹರಿಸಲಾಗುತ್ತದೆ. ಪ್ರಾಣಿಗಳು ನೀರಿಲ್ಲದೆ ಸಂಕಷ್ಟದಲ್ಲಿದ್ದು, ಹೊಂಡದಲ್ಲಿದ್ದ ನೀರು ಕೂಡ ಕಡಿಮೆಯಾಗುತ್ತಿದೆ.
ನಿತ್ಯವೂ ಕಡಿಮೆಯೆಂದರೂ ಒಂದು ಲಕ್ಷ ಲೀಟರ್ ನೀರಿನ ಅವಶ್ಯ ಇದೆ ಆದರೆ ಅಷ್ಟು ನೀರು ಲಭ್ಯವಿಲ್ಲದ ಕಾರಣ ಟ್ಯಾಂಕರ್‌ನಿಂದ ನೀರು ತರಿಸಿಕೊಳ್ಳಲಾಗಿದೆ.