ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ನೀರಿನ ಕೊರತೆ ತೀವ್ರವಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲೂ ನೀರಿಲ್ವಂತೆ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿಗೆ ಟ್ಯಾಂಕರ್ ನೀರು ತರಲಾಗಿದೆ ಎಂದು ವರದಿಗಳು ತಿಳಿಸಿದ್ದವು. ಈಗ ಡಿಸಿಎಂಗೆ ಕೂಡ ಜಲಕ್ಷಾಮದ ಬಿಸಿ ತಟ್ಟಿದೆ.
ಈ ಬಗ್ಗೆ ಸ್ವತಃ ಶಿವಕುಮಾರ್ ಮಾತನಾಡಿದ್ದಾರೆ. ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ನಮ್ಮ ಬೋರ್ ವೆಲ್ ನಲ್ಲೂ ನೀರಿಲ್ಲ. ಇನ್ನೊಂದು ಕಡೆಯಿಂದ ನೀರು ತರಲು ಹವಣಿಸುತ್ತಿದ್ದೀವಿ.
ಕಾರು ತೊಳೆಯಲು, ದನ ಕರು ತೊಳೆಯಲು ನೀರು ಬಳಸಬೇಡಿ ಅಂತ ಹೇಳಿದ್ದೇವೆ.ಆರ್‌ಓ ವಾಟರ್ ಎಲ್ಲೆಲ್ಲಿ ಕೆಟ್ಟಿದೆಯೋ ಅದನ್ನು ಸರಿಪಡಿಸಬೇಕಿದೆ ಎಂದರು. ರಾಜ್ಯದಲ್ಲಿನ ನೀರಿನ ಕೊರತೆ ಮತ್ತು ಅದನ್ನು ಸರ್ಕಾರ ಹೇಗೆ ನಿಭಾಯಿಸುತ್ತಿದೆ ಎಂಬುದರ ಬಗ್ಗೆ ಕೂಡ ವಿವರಿಸಿದರು.