ಬೆಂಗಳೂರಿನಲ್ಲಿ ನೀರಿಲ್ಲ | ಈ ಉದ್ದೇಶಕ್ಕಾಗಿ ಕುಡಿಯುವ ನೀರು ಬಳಸಿದ್ರೆ ₹ 5000 ದಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಜನ ಹನಿ ನೀರಿಗೂ ಕಷ್ಟಪಡುವ ಪರಿಸ್ಥಿತಿ ಬಂದಿದೆ. ಆದರೂ ಕೆಲವರು ಈಗಲೂ ನೀರನ್ನು ಪೋಲು ಮಾಡುತ್ತಿದ್ದಾರೆ. ಇದರಿಂದಾಗಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕುಡಿಯುವ ನೀರನ್ನು ಇತರ ಉದ್ದೇಶಗಳಿಗೆ ಬಳಸುವುದನ್ನು ನಿಷೇಧಿಸಿದೆ.

ನಿಯಮ ಉಲ್ಲಂಘನೆ ಆದರೆ ಐದು ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ.

ಯಾವ್ಯಾವ ಕೆಲಸಗಳಿಗೆ ಬಳಸುವಂತಿಲ್ಲ?
ಕಾರು ತೊಳೆಯಲು
ತೋಟಗಳಿಗೆ ನೀರು ಬಿಡಲು
ನಿರ್ಮಾಣ ಕಾಮಗಾರಿಗಾಗಿ
ಮನೆಯಲ್ಲಿ ಶೋ ಇರುವ ನೀರಿನ ಕಾರಂಜಿ
ಸಿನಿಮಾ ಮಂದಿರ ಮತ್ತು ಮಾಲ್‌ಗಳಲ್ಲಿ ಕುಡಿಯುವ ನೀರಿನ ಹೊರತು ಇನ್ಯಾವುದೇ ಬಳಕೆಗೆ
ರಸ್ತೆ ನಿರ್ಮಾಣಕ್ಕೆ ಕುಡಿಯುವ ನೀರಿನ ಬಳಕೆ ಮಾಡಿದರೆ ಐದು ಸಾವಿರ ರೂಪಾಯಿ ದಂಡ ಪಾವತಿಸಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!