ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ನೀರಿಗೆ ಯಾವುದೇ ಸಮಸ್ಯೆ ಇಲ್ಲ, ಸುಮ್ಮನೆ ಊಹಾಪೋಹ ಸುದ್ದಿಗಳು ಎಲ್ಲೆಡೆ ಓಡಾಡಿವೆ ಅಷ್ಟೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡೋದಕ್ಕೆ ಯಾವ ಪ್ರಾಬ್ಲಮ್ಮೂ ಇಲ್ಲ. ಎಲ್ಲ ಕಡೆ ಕುಡಿಯುವ ನೀರು ಸಿಗುವಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದೇನೆ. ಚುನಾವಣೆ ಬ್ಯುಸಿಲಿ ಸಭೆ ಮಾಡೋಕೆ ಆಗುತ್ತಿಲ್ಲ ಅಷ್ಟೆ. ಆದರೆ ಅಧಿಕಾರಿಗಳು ಕಾರ್ಯ ನಿರತರಾಗಿದ್ದಾರೆ ಎಂದಿದ್ದಾರೆ.