ಮೂವೀ ಮಾಫಿಯಾದವರು ಮಾಡುತ್ತಿರುವ ವಿವಾದದಿಂದ ಏನೂ ಲಾಭ ಇಲ್ಲ: ಸಿನಿಮಾ ವಿರುದ್ದದ ಟೀಕೆಗೆ ಕಂಗನಾ ರಣಾವತ್​ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಬಾಲಿವುಡ್ ನಟಿ ಕಂಗನಾ ರಣಾವತ್​ ಒಡೆತನದ ‘ಮಣಿಕರ್ಣಿಕಾ ಫಿಲ್ಮ್ಸ್​’ ಬ್ಯಾನರ್​ ಮೂಲಕ ‘ಟೀಕು ವೆಡ್ಸ್​ ಶೇರು’ (Tiku weds Sheru) ಸಿನಿಮಾ ಮೂಡಿಬಂದಿದೆ. ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಆಗಿದೆ.

‘ಅಮೇಜಾನ್​ ಪ್ರೈಂ ವಿಡಿಯೋ’ದಲ್ಲಿ ಈ ಚಿತ್ರವನ್ನು ನೋಡಿದ ಕೆಲವರು ನೆಗೆಟಿವ್​ ವಿಮರ್ಶೆ ನೀಡುತ್ತಿದ್ದಾರೆ. ಇದಕ್ಕೆ ಇದೀಗ ಕಂಗನಾ ಬೇಸರ ವ್ಯಕ್ತಪಡಿಸಿದ್ದಾರೆ.

ನವಾಜುದ್ದೀನ್​ ಸಿದ್ಧಿಕಿ (Nawazuddin Siddiqui) ಮತ್ತು ಅವನೀತ್​ ಕೌರ್​ ಅವರು ಈ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ.

ಹಲವು ವಿಚಾರಗಳ ಬಗ್ಗೆ ಪ್ರೇಕ್ಷಕರು ತಕರಾರು ತೆಗೆದಿದ್ದಾರೆ. ಇದೆಲ್ಲವೂ ಮೂವೀ ಮಾಫಿಯಾದವರ ಕೈವಾಡ ಎಂದು ಕಂಗನಾ ರಣಾವತ್​ ಆರೋಪಿಸಿದ್ದಾರೆ.

ಕಂಗನಾ ಅಂದ್ರೆ ಅಲ್ಲಿ ಒಂದಲ ಒಂದು ಸುದ್ದಿಯಾಗುತ್ತೆ. ಭಾರತೀಯ ಚಿತ್ರರಂಗದ ಅನೇಕ ವಿಚಾರಗಳ ಬಗ್ಗೆ ಅವರು ಟೀಕೆ ಮಾಡುತ್ತಾರೆ.ಹಾಗಾಗಿ ಅವರನ್ನು ಜನರು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತಾರೆ. ಕಂಗನಾ ಅವರೇ ತಪ್ಪು ಮಾಡಿದರೆ ನೆಟ್ಟಿಗರು ಖಂಡಿತವಾಗಿಯೂ ಛಾಟಿ ಬೀಸುತ್ತಾರೆ. ಈಗ ಅವರು ನಿರ್ಮಾಣ ಮಾಡಿರುವ ‘ಟೀಕು ವೆಡ್ಸ್​ ಶೇರು’ ಸಿನಿಮಾದಲ್ಲಿ ನಾಯಕ ಮತ್ತು ನಾಯಕಿ ನಡುವೆ ವಯಸ್ಸಿನ ಅಂತರ ಜಾಸ್ತಿ ಇದೆ. ಇದರ ಬಗ್ಗೆ ಒಂದು ವರ್ಗದ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆದರೆ ಇಂಥ ಟೀಕೆಗಳಿಗೆ ಪ್ರೇಕ್ಷಕರು ಕಿವಿ ಕೊಡಬಾರದು ಎಂದು ಕಂಗನಾ ಹೇಳಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ.

‘ವಯಸ್ಸಿನ ವಿಚಾರ ಇಟ್ಟುಕೊಂಡು ಮೂವೀ ಮಾಫಿಯಾದವರು ಮಾಡುತ್ತಿರುವ ವಿವಾದದಿಂದ ಏನೂ ಲಾಭ ಇಲ್ಲ’ ಎಂದು ಕಂಗನಾ ರಣಾವತ್​ ಹೇಳಿದ್ದಾರೆ. ‘ನನ್ನ ಸಿನಿಮಾವನ್ನು ಹಾಳು ಮಾಡಲು ಮೂವೀ ಮಾಫಿಯಾದವರು ಪ್ರಯತ್ನಿಸುತ್ತಿದ್ದಾರೆ. ಚಿತ್ರ ರಿಲೀಸ್​ ಆಗುವುದಕ್ಕೂ ಮುನ್ನವೇ ಸುಳ್ಳು ವಿಮರ್ಶೆಗಳು ಮತ್ತು ಅಪಪ್ರಚಾರ ನಡೆಯುತ್ತಿದೆ. ಈಗ ನಮ್ಮ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ನೀವೇ ಸ್ವತಃ ನೋಡಿ. ನಿಮ್ಮ ಸ್ನೇಹಿತರ ಅಭಿಪ್ರಾಯ ಕೇಳಿ. ಪೇಯ್ಡ್​ ವಿಮರ್ಶೆಗಳು ಮತ್ತು ನಕಲಿ ಟ್ರೆಂಡ್​ಗಳನ್ನು ನಂಬಬೇಡಿ’ ಎಂದು ಕಂಗನಾ ​ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!