ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಕೆ ಸಾಹೇಬ್ರು ಹೇಳಿರುವುದರಲ್ಲಿ ತಪ್ಪೇನಿಲ್ಲ, ಎಲ್ಲರೂ ಬರಲಿ ಅನ್ನೋದಷ್ಟೇ ಅವರ ಉದ್ದೇಶವಾಗಿತ್ತು ಎಂದು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಡಿಸಿಎಂ ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ.
ಡಿಕೆಶಿ ಅವರು ಹೇಳಿರುವುದರಲ್ಲಿ ತಪ್ಪೇನಿಲ್ಲ. ಸಿಎಂ, ಡಿಸಿಎಂ ಸಿನಿಮಾದವರನ್ನು ತಮ್ಮ ಮನೆಯವರು ಅಂದುಕೊಂಡಿದ್ದಾರೆ. ಅವರು ಚಿತ್ರರಂಗಕ್ಕೆ ದೂರದವರಲ್ಲ, ತುಂಬಾ ಹತ್ತಿರದವರು. ಅವರು ಹೇಳಿರುವುದು ದೊಡ್ಡ ವಿಷಯ ಆಗಲ್ಲ, ದೊಡ್ಡ ವಿಷಯ ಮಾಡುತ್ತಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.