April 11, 2026
Saturday, April 11, 2026
spot_img

ಪೆಟ್ರೋಲ್ ಇದೆ, ಗ್ಯಾಸ್ ಇದೆ, ಕರೆಂಟ್ ಕೂಡ ಇದೆ: ಸುಳ್ಳು ಸುದ್ದಿಗೆ ಜೋಶಿ ಕೊಟ್ಟ ಉತ್ತರವೇನು?

ಹೊಸದಿಗಂತ ಧಾರವಾಡ:

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ದೇಶದ ಇಂಧನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶ್ಲಾಘಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇವಲ ಒಂದೇ ವರ್ಷದಲ್ಲಿ ಗಿಗಾವ್ಯಾಟ್ ಲೆಕ್ಕದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿರುವುದು ದೇಶದ ಇತಿಹಾಸದಲ್ಲಿಯೇ ಹೊಸ ದಾಖಲೆ ಎಂದರು.

2014ರಲ್ಲಿ 250 ಗಿಗಾವ್ಯಾಟ್ ಇದ್ದ ವಿದ್ಯುತ್ ಉತ್ಪಾದನೆಯು ಇಂದು ಗಣನೀಯವಾಗಿ ಏರಿಕೆಯಾಗಿದೆ. ಕಳೆದ ವರ್ಷವೊಂದರಲ್ಲೇ 55 ಗಿಗಾವ್ಯಾಟ್ ವಿದ್ಯುತ್ ಸೇರ್ಪಡೆ ಮಾಡುವ ಮೂಲಕ ಐತಿಹಾಸಿಕ ಸಾಧನೆ ಮಾಡಲಾಗಿದೆ.

44 ಗಿಗಾವ್ಯಾಟ್ ಸೌರಶಕ್ತಿ ಹಾಗೂ ಬಯೋ ಎನರ್ಜಿ ಮೂಲಕ ದೇಶ ಇಂದು ಇಂಧನ ಸುರಕ್ಷತೆಯನ್ನು ಹೊಂದಿದೆ. ವಿದ್ಯುತ್ ಲೈನ್ ಜಾಲವು 2014ರಲ್ಲಿದ್ದ 22 ಸಾವಿರ ಕಿ.ಮೀ ನಿಂದ ಇಂದು 63 ಸಾವಿರ ಕಿ.ಮೀ ಗೆ ಏರಿಕೆಯಾಗಿದೆ.

ಇಂಧನ ಕೊರತೆಯ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವ ವಿಪಕ್ಷಗಳಿಗೆ ತಿರುಗೇಟು ನೀಡಿದ ಅವರು, “ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಿಗುತ್ತಿಲ್ಲವೇ? ತೈಲ ಸಮಸ್ಯೆ ಎಲ್ಲಿ ಉದ್ಭವಿಸಿದೆ?” ಎಂದು ಪ್ರಶ್ನಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !