ಅಭಿಮಾನ, ಪ್ರೀತಿ ಇರಲಿ ಆದ್ರೆ ನಮ್ಮ ಕುಟುಂಬಕ್ಕೆ ಕಣ್ಣೀರು ಹಾಕಿಸಬಾರದು: ಶಿವಣ್ಣ ಬೇಸರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆರ್‌ಸಿಬಿ ಗೆಲುವು ಒಂದೇ ನಿಮಿಷದಲ್ಲಿ ಸೂತಕಕ್ಕೆ ಬದಲಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ.

ಈ ಬಗ್ಗೆ ನಟ ಶಿವರಾಜ್‌ಕುಮಾರ್‌ ಭಾವಿಕ ಪೋಸ್ಟ್‌ ಒಂದನ್ನು ಮಾಡಿದ್ದಾರೆ. ಅಭಿಮಾನ, ಪ್ರೀತಿ ಎಷ್ಟೇ ಇರಲಿ ಆದರೆ ನಿಮ್ಮ ಕುಟುಂಬದವರಿಗೆ ನೋವು ಕೊಡುವಂಥ ಕೆಲಸ ಮಾಡಬೇಡಿ ಎಂದಿದ್ದಾರೆ.

ಗೆಲುವಿನ ಸಂಭ್ರಮಕ್ಕೆ ಸಾವಿನ ಸೂತಕ ತುಂಬಾ ನೋವಿನ ಸಂಗತಿ. ನೊಂದ ಕುಟುಂಬಸ್ಥರಿಗೆ ಆ ದೇವರು ಈ ನೋವನ್ನು ಭರಿಸುವ ಶಕ್ತಿ ಕೊಡಲಿ. ಸರ್ಕಾರ ಮೃತಪಟ್ಟವರಿಗೆ ನೆರವಾಗಿ ನಿಲ್ಲಲ್ಲಿ ಎಂದು ಪ್ರಾರ್ಥಿಸುತ್ತೇವೆ. ನಾನು ಇಂದಿಗೂ ಹೇಳೋದು ಒಂದೇ, ಅಭಿಮಾನ, ಪ್ರೀತಿ ನಮ್ಮ ಕುಟುಂಬದ ನೋವಿಗೆ ಕಾರಣವಾಗಬಾರದು. ನಿಮ್ಮ ಅಭಿಮಾನ, ನಿಮ್ಮ ಪ್ರೀತಿ ಎಲ್ಲರನ್ನು ಕಾಪಾಡುತ್ತದೆ. ನಿಮ್ಮ ಕುಟುಂಬದವರನ್ನು ನೀವು ಮಾತ್ರ ಕಾಪಾಡಲು ಸಾಧ್ಯ. ಓಂ ಶಾಂತಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!