ಹೊಸದಿಗಂತ ವರದಿ ಹುಬ್ಬಳ್ಳಿ:
ರಾಜ್ಯದಲ್ಲಿ ಮಳೆ ಖಂಡಿತವಾಗಿ ಬರುತ್ತದೆ. ಜಲಪ್ರಳಯ ಆಗುವ ಎಲ್ಲ ಲಕ್ಷಣಗಳಿವೆ. ಕಾಲದ ಅನುಸಾರದಂತೆ ಎಲ್ಲವೂ ಸರಿ ಹೋಗುತ್ತದೆ ಎಂದು ಕೋಡಿ ಮಠದ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಬಹಳ ಮಳೆಯಾಗಿ ಒಂದೆರಡು ರಾಷ್ಟ್ರಗಳು ಮುಚ್ಚುವ ಪ್ರಸಂಗವಿದೆ. ಎಲ್ಲೋ ಆದ ಘಟನೆ ವಾಯುವ್ಯ ಮಾಲಿನ್ಯದ ಮೂಲಕ ಭಾರತಕ್ಕೆ ಬಂದು ಇಲ್ಲಿಯ ಜನರು ಅಪಮೃತ್ಯುವಿಗಿಡಾಗಬಹುದು ಎಂದರು.
ವಿಜಯ ದಶಮಿಯಿಂದ ಸಂಕ್ರಾತಿಯವರೆಗೆ ಜಗತ್ತಿನ ಪ್ರಮುಖ ಸಾಮ್ರಾಟರು ತಲ್ಲಣಗೊಳ್ಳುವ ದುರ್ಘಟನೆ ನಡೆಯುತ್ತದೆ. ಆಳುವವರು ಅರಿತರೇ ಎದುರಾಗುವ ಸಮಸ್ಯೆಯಿಂದ ಪಾರಾಗಬಹುದು. ಇಲ್ಲವಾದರೆ ಕಟ್ಟಿತ್ತ ಬುತ್ತಿ. ಕರುನಾಡಿಗೆ ಆಪತ್ತುಗಳಿವೆ. ಅವು ಕಷ್ಟಕರಲ್ಲ. ಕೆಲವು ಸಾವುನೋವು, ದುಖಃಗಳು, ಕೆಲವರ ಪ್ರಭಾವಗಳು ಬರುತ್ತವೆ. ದೈವ ಕೃಪೆಯಿಂದ ಪಾರಾಗುತ್ತಾರೆ ಎಂದು ಹೇಳಿದರು.
ಹಿಂದೆ ರಾಜ್ಯದಲ್ಲಿ ಒಂದು ಸ್ಥಿರ ಸರ್ಕಾರ ಬರುತ್ತದೆ ಎಂದು ಹೇಳಿದ್ದು ಹಾಗೇ ಆಗಿದೆ. ಈಗ ಮೂರು ಅವಘಡಗಳು ಸಂಭವಿಸುತ್ತವೆ ಎಂದು ಹೇಳಿದ್ದೇನೆ. ಅದು ಆಗುತ್ತದೆ. ಆಳುವ ನಾಯಕರು ಎಚ್ಚೆತ್ತುಕೊಂಡರೆ ಅವುಗಳಿಂದ ತಪ್ಪಿಸಿಕೊಳ್ಳಬಹುದು ಇಲ್ಲವಾದರಲ್ಲಿ ಜಗತ್ತಿನ ಸಾಮ್ರಾಟರು ತಲ್ಲಣವಾಗುತ್ತಾರೆ ಎಂದು ತಿಳಿಸಿದರು.
ಸರ್ಕಾರ ನೀಡಿದ ಗ್ಯಾರಂಟಿಗಳು ಒಳ್ಳೆಯದಾಗಿವೆ. ಯಾವ ಹೆಣ್ಣಿಗೆ ಸ್ವತಂತ್ರ ಇರಲಿಲ್ಲ. ಅಂತಹ ಹೆಣ್ಣು ಈಗ ಸ್ವತಂತ್ರವಾಗಿ ಹೊರಗಡೆ ಬಂದಿದ್ದಾರೆ. ದೇಶ ಸುತ್ತು ಕೋಶ ಓದು ಎಂದು ಹೇಳಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಪೂರ್ನಾವ ಅಕಾರ ನಡೆಸುತ್ತಾದ ಎಂಬ ಮಾಧ್ಯಮದರ ಪ್ರಶ್ನೆಗೆ ಪ್ರತಿಕ್ರಿಸಿದ ಅವರು,
ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ. ಆದರೆ ಊರಿನಲ್ಲಿನ ಎಲ್ಲಾ ವಾಸನೆ ಮೂಗಿಗೆ ಮುಟ್ಟುತ್ತೆ ಎಂದು ಒಗಟು ನುಡಿದರು.