ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿಗರೇ ಗಮನಿಸಿ, ನಾಳೆ ಈ ಏರಿಯಾಗಳಲ್ಲಿ ಕರೆಂಟ್ ಇರೋದಿಲ್ಲ. ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಇಂದೇ ಮಾಡಿಕೊಳ್ಳಿ.
ಕೆಪಿಟಿಸಿಎಲ್ ವತಿಯಿಂದ ಜಾಲಹಳ್ಳಿ ವಿಭಾಗದ 66/11 ಕೆವಿ ಎ೦.ಇ.ಐ ಸಬ್‌ಸ್ಟೇಷನ್ ಉಪಕೇಂದ್ರದಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಫೆ.10ರಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಎಜಿಬಿಜಿ-ಲೇಔಟ್, ಬೈರವೇಶ್ವರ ಹೋಟೆಲ್, ಶೆಟ್ಟಿಹಳ್ಳಿ ಗ್ರಾಮ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಸನ್‌ಸಾ ಪ್ರದೇಶಗಳು, ಜುಂಜಪ್ಪ ಸರ್ಕಲ್, ಲೇಕ್ ವ್ಯೂ, ನಂದನ ನಗರ, ಕಾವೇರಿ ಲೇಔಟ್, ಬೋನ್‌ವಿಲ್ ಏರಿಯಾ, ಚಿಕ್ಕಸಂದ್ರ ಐರ್‌ಲೇಔಟ್, ಸಪ್ತಗಿರಿ ಕಾಲೇಜು, ಜಗದೇಶ್ ಲೇಔಟ್, ನಾಗದೇಶ್ ಲೇಔಟ್, ತುಮಕೂರು ಮುಖ್ಯ ರಸ್ತೆ, ಗಣೇಶ ಸಾ ಮಿಲ್, ಮಹೇಶ್ವರಿ ನಗರ, ಈಗಲ್ ಬೇಕರಿ ಸುತ್ತಮುತ್ತಲಿನ ಹತ್ತಿರ, ಕೆಂಪೇಗೌಡ ನಗರ, ಕೆಕೆ ರಸ್ತೆ, ಟಿ-ದಾಸರಹಳ್ಳಿ ಮೆಟ್ರೋ ಹಿಂಭಾಗ, ಪೈಪ್‌ಲೈನ್ ರಸ್ತೆ, ಬೃಂದಾವನ ಲೇಔಟ್, ಕಲ್ಯಾಣನಗರ, ಬಾಗಲಗುಂಟೆ, ಕಿರ್ಲೋಸ್ಕರ್ ಲೇಔಟ್, ಎನ್‌ಎಂಎಚ್ ಲೇಔಟ್, ಶೌರ್ಯ ಲೇಔಟ್, ಮೀನಾಕ್ಷಿ ಲೇಔಟ್, ಸಿದ್ದೇಶ್ವರ ಲೇಔಟ್, ಸಹ್ಯಾದ್ರಿ ಬಳಗ, ಎಜಿಬಿಜಿ ಲೇಔಟ್, ಸಪ್ತಗಿರಿ ವೈದ್ಯಕೀಯ ಕಾಲೇಜು, ಹೆಸರಘಟ್ಟ ಮುಖ್ಯರಸ್ತೆ, ಚಿಕ್ಕಬಾಣಾವರ, ಸೋಮಶೆಟ್ಟಿಹಳ್ಳಿ, ಕೆರೆಗುಡ್ಡದಹಳ್ಳಿ, ಮೇದರಹಳ್ಳಿ, ಗುಣಿ ಅಗ್ರಹಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ.



