ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಹಲವು ಕಡೆ ಭಾರಿ ಪ್ರಮಾಣದಲ್ಲಿ ಚಳಿ ಬೀಳಲಿದೆ. ಈಗಿರುವ ಕನಿಷ್ಠ ತಾಪಮಾನಕ್ಕಿಂತ ಕನಿಷ್ಠ 4 ಡಿಗ್ರಿ ಸೆಲ್ಸಿಯಸ್‌ಗಿಂತ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ಹೇಳಿದೆ. ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು, ಉತ್ತರ ಒಳನಾಡಿನಲ್ಲಿ ಎಲ್ಲ ಕಡೆ ಒಣ ಹವೆಯ ಜತೆಗೆ ಚಳಿಯೂ ಇರಲಿದೆ.
ಮಲೆನಾಡಿನ ಪ್ರದೇಶಗಳು ಸೇರಿದಂತೆ ಕೆಲವು ಕಡೆ ಟ್ರಿಪ್ ಹೋಗುತ್ತೇವೆ ಎಂದು ಪ್ಲಾನ್ ಹಾಕಿಕೊಂಡಿದ್ದರೆ ಸೂಕ್ತ ತಯಾರಿ ಮಾಡಿಕೊಳ್ಳುವುದು ಒಳಿತು. ಏಕೆಂದರೆ ಆ ಪ್ರದೇಶಗಳಲಿ ತುಂಬಾ ಚಳಿ ಇದೆ.
ಚಳಿಯಂದ ಮಾತ್ರ ಬಿಸಿಲು ಇಲ್ಲವೇ ಎಂದು ಅಂದುಕೊಳ್ಳುವುದೇ ಬೇಡ. ಬಿಸಿಲು ಸಹ ಇರಲಿದೆ. ದಕ್ಷಿಣ, ಉತ್ತರ ಒಳನಾಡುಗಳು ಸೇರಿದಂತೆ ಕರಾವಳಿ ಪ್ರದೇಶಗಳ ಕೆಲವು ಕಡೆ 1.6 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಳ ಕಾಣಲಿದೆ. ಹೀಗಾಗಿ ಒಂದೇ ದಿನಗಳಲ್ಲಿ ಎರಡೆರಡು ರೀತಿಯ ಹವಾಮಾನವನ್ನು ನಾಗರಿಕರು ನೋಡಬೇಕಾಗಿದೆ.