ಹೊಸದಿಗಂತ ಡಿಜಿಟಲ್ ಡೆಸ್ಕ್:
ಏನೇನೋ ರೀಸನ್ ಹೇಳಿ ರಜೆ ಹಾಕೋ ಜನರ ಮಧ್ಯೆ ನನ್ನ ಲವ್ ಬ್ರೇಕಪ್ ಆಗಿದೆ. ರಿಕವರ್ ಆಗೋಕೆ ಟೈಮ್ ಬೇಕು. ಕೆಲಸ ಮಾಡೋಕೆ ಆಗೋದಿಲ್ಲ ಎಂದು ಉದ್ಯೋಗಿಯೊಬ್ಬ ರಜೆ ಕೇಳಿದ್ದಾನೆ.
ʼನಾಟ್ ಡೇಟಿಂಗ್ʼ ಎಂಬ ಸಂಸ್ಥೆಯ ಸಿಇಒ ಜಸ್ವೀರ್ ಸಿಂಗ್ ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬ ರಜೆ ಬಗ್ಗೆ ಉಲ್ಲೇಖಿಸಿ ಕಳುಹಿಸಿರುವ ಇಮೇಲ್‌ನ್ನು ಶೇರ್ ಮಾಡಿಕೊಂಡಿದ್ದಾರೆ. ಜಸ್ವೀರ್ ಸಿಂಗ್ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್‌ಗೆ ಅತ್ಯಂತ ಪ್ರಾಮಾಣಿಕ ರಜೆ ಕೋರಿಕೆ, ಜೆನ್‌ಝೀಗಳಿಗೆ ಯಾವುದೇ ಮುಚ್ಚುಮರೆ ಇಲ್ಲ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಈ ಇಮೇಲ್‌ನಲ್ಲಿ ಉದ್ಯೋಗಿಯೂ ಅಕ್ಟೋಬರ್ 28ರಿಂದ ನವೆಂಬರ್ 8ರ ತನಕ ರಜೆ ಬೇಕು. ನನಗೆ ಇತ್ತೀಚೆಗಷ್ಟೆ ಲವ್ ಬ್ರೇಕಪ್ ಆಗಿದೆ. ಹೀಗಾಗಿ, ಕೆಲಸದ ಮೇಲೆ ಗಮನಹರಿಸಲು ಆಗುತ್ತಿಲ್ಲ. ನನಗೆ ಸಣ್ಣದೊಂದು ಬ್ರೇಕ್ ಬೇಕಿದೆ. ಇಂದು ನಾನು ಕೆಲಸ ಮಾಡಲಿದ್ದೇನೆ. ಆದರೆ 28ರಿಂದ 8ರವರೆಗೆ ರಜೆ ಬೇಕಿದೆ ಎಂದು ಬರೆದಿರುವುದನ್ನು ನೀವು ನೋಡಬಹುದು.
VIRAL |Gen Zಗಳಿಗಿಲ್ಲ ಫಿಲ್ಟರ್! ಬ್ರೇಕಪ್ ಆಗಿದೆ, ರಜೆ ಬೇಕೆಂದ ಯುವ ಉದ್ಯೋಗಿ!

