ನೀವು ಕಂಪನಿಯಿಂದ ವಜಾ ಆಗಿದ್ದೀರಾ ? ಹಾಗಾದ್ರೆ ತಕ್ಷಣವೇ ಈ 3 ಕೆಲಸ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕೋವಿಡ್‌ ನಂತರದ ದಿನಗಳಲ್ಲಿ ಆರ್ಥಿಕ ಹಿಂಜರಿತ ಅಥವಾ ಹೀಗೆ ಹಲವಾರು ಕಾರಣಗಳಿಂದ ದೇಶದ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದನ್ನು ನೀವೆಲ್ಲಾ ನೋಡುತ್ತಿರುವಿರಿ. ಒಂದು ವೇಳೆ ನೀವು ಆ ಪಟ್ಟಿಯಲ್ಲಿದ್ದರೆ ಅಂದರೆ ನೀವು ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ವಜಾಗೊಂಡಿದ್ದರೆ ತಕ್ಷಣ ಈ ೩ ಮೂರು ಕೆಲಸಗಳನ್ನು ಮಾಡಿ.

ನಿಮ್ಮ ಕೆಲಸದ ಅನುಭವಗಳನ್ನು ಪಟ್ಟಿ ಮಾಡಿ :
ಒಂದು ಕೆಲಸದಿಂದ ಹೊರ ನಡೆದ ಬಳಿಕ ಮುಂದೆ ಕೆಲಸ ಹುಡುಕಲು ಬೇಕಾದ ಅಗತ್ಯಗಳನ್ನು ಮಾಡಿಕೊಳ್ಳಬೇಕು. ಹಾಗಾಗಿ ಮೊದಲು ನೀವು ಕಲಿತ ಅಂಶಗಳನ್ನು ಒಂದು ಪಟ್ಟಿ ಮಾಡಿ.

ನಿಮ್ಮ ರೆಸ್ಯೂಮ್‌ನಲ್ಲಿರುವ ಕೌಶಲ್ಯಗಳ ಮೇಲೆ ಕೇಂದ್ರೀಕರಿಸಿ :
ನಿಮ್ಮ ರೆಸ್ಯೂಮ್ ಅನ್ನು ಪರಿಷ್ಕರಿಸುವಾಗ, ನಿಮ್ಮಲ್ಲಿರುವ ಕೌಶಲ್ಯಗಳನ್ನು ಪಟ್ಟಿ ಮಾಡಿ ಅದಕ್ಕೆ ಸೇರಿಸಿ.
ಉದ್ಯೋಗದಾತರು ಉತ್ತಮ ಕೌಶಲ್ಯಗಳನ್ನು ಉಳ್ಳವರನ್ನು ಹುಡುಕುತ್ತಿದ್ದಾರೆ ಹಾಗಾಗಿ ಕಲಿಕೆ, ಹೊಂದಿಕೊಳ್ಳುವಿಕೆ, ಚುರುಕುತನ, ಕುತೂಹಲ, ಸಂವಹನ ಕೌಶಲ್ಯಗಳು – ಆ ವಿಷಯಗಳನ್ನು ರೆಸ್ಯೂಮ್‌ ನಲ್ಲಿ ಸೇರಿಸಿ.

ಫ್ರೇಶ್‌ ಮೈಂಡ್‌ ನಿಂದ ಕೆಲಸ ಹುಡುಕಿ :
ನಿಮ್ಮ ಅನುಭವಗಳನ್ನು ಕೌಶಲ್ಯಗಳಾಗಿ ಭಾಷಾಂತರಿಸಲು ಮತ್ತು ರೆಸ್ಯೂಮ್‌ನಲ್ಲಿ ಇರಿಸಲು ನಿಮಗೆ ಸಹಾಯ ಮಾಡುವವರ ವಿಭಿನ್ನ ಬಾಹ್ಯ ದೃಷ್ಟಿಕೋನವು ತುಂಬಾ ಸಹಾಯಕವಾಗಿದೆ. ತದನಂತರ ಉತ್ತಮ ಆಲೋಚನೆಯೊಂದಿಗೆ ಕೆಲಸ ಹುಡುಕಲು ಆರಂಭಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!