ಗದ್ದಲ, ಟ್ರಾಫಿಕ್ ಜಾಮ್ ಮತ್ತು ದೈನಂದಿನ ಒತ್ತಡದಿಂದ ಕೆಲ ಕಾಲ ದೂರವಿರಬೇಕು ಎನಿಸಿದರೆ, ದೆಹಲಿಯ ಸಮೀಪದಲ್ಲಿರುವ ಈ ಗಿರಿಧಾಮಗಳು ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡಬಹುದಾದ ಅತ್ಯುತ್ತಮ ಆಯ್ಕೆಯಾಗಬಹುದು.
ಲ್ಯಾನ್ಸ್‌ಡೌನ್ (Lansdowne)
ಉತ್ತರಾಖಂಡದ ಗರ್ಹ್ವಾಲ್ ಪ್ರದೇಶದಲ್ಲಿರುವ ಈ ಸಣ್ಣ ಹಿಲ್ಸ್ಟೇಶನ್, ಪೈನ್ ಮರಗಳ ನಡುವೆ ನೆಲೆಗೊಂಡಿದೆ. ಭುಲ್ಲಾ ತಾಲ್ ಸರೋವರ, ಗರ್ಹ್ವಾಲಿ ವಸ್ತುಸಂಗ್ರಹಾಲಯ, ತಾರಕೇಶ್ವರ್ ಮಹಾದೇವ ದೇವಾಲಯ ಈ ಸ್ಥಳದ ಪ್ರಮುಖ ಆಕರ್ಷಣೆಗಳಾಗಿವೆ. ದೆಹಲಿಯಿಂದ ಸುಮಾರು 6 ಗಂಟೆಗಳ ಪ್ರಯಾಣದಲ್ಲಿ ತಲುಪಬಹುದಾದ ಶಾಂತ ಮತ್ತು ಸುಂದರ ತಾಣವಾಗಿದೆ.
ನೈನಿತಾಲ್ (Nainital)
ಸರೋವರಗಳು ಮತ್ತು ಬೆಟ್ಟಗಳಿಂದ ಆವೃತವಾದ ನೈನಿತಾಲ್ ಅನ್ನು “ಸರೋವರಗಳ ನಗರ” ಎಂದು ಕರೆಯಲಾಗುತ್ತದೆ. ಇಲ್ಲಿ ನೈನಿ ಸರೋವರದಲ್ಲಿ ಬೋಟಿಂಗ್, ಸ್ನೋ ವ್ಯೂ ಪಾಯಿಂಟ್‌ಗೆ ರೋಪ್‌ವೇ ಮೂಲಕ ಪ್ರವೇಶ ಮತ್ತು ಮಲ್ ರೋಡ್ ಮೇಲೆ ವಾಕ್ ನಿಜಕ್ಕೂ ಆನಂದದ ಅನುಭವ ನೀಡುತ್ತದೆ.
ಕಸೌಲಿ (Kasauli)
ವಸಾಹತುಶಾಹಿ ಕಾಲದ ಕಟ್ಟಡಗಳು, ಕ್ರೈಸ್ಟ್ ಚರ್ಚ್, ಮಂಕಿ ಪಾಯಿಂಟ್ ಮತ್ತು ಗಿಲ್ಬರ್ಟ್ ಟ್ರೈಲ್ ಇವೆಲ್ಲವೂ ಕಸೌಲಿಯ ಹಳೆಯ ಶೈಲಿಯ ಭವ್ಯತೆಯನ್ನು ತೋರಿಸುತ್ತವೆ. ರೂಫ್‌ಟಾಪ್ ಕೆಫೆಗಳಲ್ಲಿ ವಿಶ್ರಾಂತಿ ಪಡೆಯಲು ಇದು ಐಡಿಯಲ್ ಪ್ಲೇಸ್.
ಮುಕ್ತೇಶ್ವರ (Mukteshwar)
ಇದು ಕಮರ್ಷಿಯಲ್ ಪ್ರವಾಸಿಗರಿಂದ ತುಂಬಿರದ, ಶಾಂತ ಪ್ರವಾಸ ತಾಣ. ಮುಕ್ತೇಶ್ವರ ಧಾಮ್, ಚೌಲಿ ಕಿ ಜಲಿ ದಂಡೆ ಮೇಲೆ ತಿರುಗಾಟ ಮತ್ತು ಸೇಬಿನ ತೋಟಗಳು ಇಲ್ಲಿ ಮುಖ್ಯ ಆಕರ್ಷಣೆ.
ಪರ್ವಾನೂ (Parwanoo)
ಹಿಮಾಚಲದ ಈ ಶಾಂತ ಗಿರಿಧಾಮ ಪರ್ವಾನೂ, ಕೇಬಲ್ ಕಾರ್, ಹಣ್ಣಿನ ತೋಟಗಳು ಮತ್ತು ಸುಂದರ ಬೆಟ್ಟದ ನೋಟಗಳಿಗಾಗಿ ಪ್ರಖ್ಯಾತ. ದೆಹಲಿಯಿಂದ ಸುಮಾರು 5-6 ಗಂಟೆಗಳಷ್ಟು ದೂರದಲ್ಲಿದೆ. ಇದು ಶಾಂತಿಯುತ ಪ್ರವಾಸಕ್ಕಾಗಿ ಉತ್ತಮ ಆಯ್ಕೆಯಾಗಿದೆ.
ಈ ಎಲ್ಲಾ ತಾಣಗಳು ಪ್ರಕೃತಿಯ ಸೌಂದರ್ಯ, ಶಾಂತ ಪರಿಸರ ಮತ್ತು ಹವಾಮಾನದಿಂದ ಮನಸ್ಸಿಗೆ ನವಚೈತನ್ಯ ತುಂಬುವಲ್ಲಿ ಸಹಾಯ ಮಾಡುತ್ತವೆ.