ಪ್ರತಿ ಹೆಣ್ಣುಮಗುವಿನ ಪಾಲಿಗೆ ಅವಳ ತಂದೆಯೇ ಮೊದಲ ಹೀರೋ. ಮಗಳ ವ್ಯಕ್ತಿತ್ವ ರೂಪಿಸುವಲ್ಲಿ ತಂದೆಯ ಪಾತ್ರ ಬಹಳ ದೊಡ್ಡದು. ಆದರೆ, ಅರಿವಿಲ್ಲದೆಯೇ ತಂದೆಯಂದಿರು ಮಾಡುವ ಕೆಲವು ಸಣ್ಣ ತಪ್ಪುಗಳು ಮಗಳ ಮನಸ್ಸಿನ ಮೇಲೆ ಮತ್ತು ಆಕೆಯ ಭವಿಷ್ಯದ ಮೇಲೆ ಆಳವಾದ ಪರಿಣಾಮ ಬೀರಬಹುದು. ತಂದೆಯಾದವನು ಮಗಳ ವಿಚಾರದಲ್ಲಿ ತಪ್ಪಿಯೂ ಮಾಡಬಾರದು ಈ ಕೆಳಗಿನ ತಪ್ಪುಗಳನ್ನು:
ಮಗಳನ್ನು ಬೇರೆಯವರ ಮಕ್ಕಳೊಂದಿಗೆ ಅಥವಾ ಸಹೋದರರೊಂದಿಗೆ ಹೋಲಿಕೆ ಮಾಡುವುದು ಆಕೆಯ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಪ್ರತಿಯೊಬ್ಬ ಮಗುವೂ ವಿಶಿಷ್ಟ ಎಂಬುದು ನೆನಪಿರಲಿ.
ಸುರಕ್ಷತೆಯ ಹೆಸರಿನಲ್ಲಿ ಆಕೆಯ ಪ್ರತಿಯೊಂದು ಹೆಜ್ಜೆಗೂ ಅತಿಯಾದ ನಿರ್ಬಂಧ ಹೇರುವುದು ಆಕೆಯ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ನಾಶಪಡಿಸುತ್ತದೆ.
ಮಗಳು ತನ್ನ ಸಮಸ್ಯೆಗಳನ್ನು ಹೇಳಿಕೊಂಡಾಗ ಅದನ್ನು ನಿರ್ಲಕ್ಷಿಸಬೇಡಿ. ಆಕೆಯ ಭಾವನೆಗಳಿಗೆ ಗೌರವ ನೀಡಿ, ಆಕೆಗೆ ನೀವು ಬೆನ್ನೆಲುಬಾಗಿ ನಿಲ್ಲುತ್ತೀರಿ ಎಂಬ ಭರವಸೆ ನೀಡಿ.
ಹೆಣ್ಣುಮಕ್ಕಳು ಇದನ್ನು ಮಾಡಬಾರದು, ಅದು ಗಂಡುಮಕ್ಕಳಿಗೆ ಮಾತ್ರ ಮೀಸಲು ಎಂಬ ಹಳೆಯ ಚಿಂತನೆಗಳನ್ನು ಆಕೆಯ ಮೇಲೆ ಹೇರಬೇಡಿ. ಆಕೆಯ ಕನಸುಗಳಿಗೆ ರೆಕ್ಕೆ ನೀಡಿ.
ಎಷ್ಟೇ ಕೆಲಸದ ಒತ್ತಡವಿದ್ದರೂ ಮಗಳೊಂದಿಗೆ ಸಮಯ ಕಳೆಯುವುದನ್ನು ಮರೆಯಬೇಡಿ. ತಂದೆಯ ಪ್ರೀತಿ ಮತ್ತು ಸಮಯ ಮಗಳಿಗೆ ಜಗತ್ತಿನಲ್ಲೇ ಅತ್ಯಂತ ಅಮೂಲ್ಯವಾದ ಉಡುಗೊರೆ.
ನೆನಪಿಡಿ.. ತಂದೆಯು ನೀಡುವ ಗೌರವ ಮತ್ತು ಪ್ರೀತಿಯೇ ಮಗಳು ಹೊರಗಿನ ಜಗತ್ತನ್ನು ಎದುರಿಸಲು ಬೇಕಾದ ಅತಿದೊಡ್ಡ ಶಕ್ತಿ.



