April 30, 2026
Thursday, April 30, 2026
spot_img

ಪಶ್ಚಿಮ ಏಷ್ಯಾ ಸಂಘರ್ಷದಿಂದ ಎಂಟು ಭಾರತೀಯ ನಾಗರಿಕರು ಸಾವು, ಓರ್ವ ನಾಪತ್ತೆ: ವಿದೇಶಾಂಗ ಸಚಿವಾಲಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಎಂಟು ಭಾರತೀಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಓರ್ವ ನಾವಿಕ ಕಾಣೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಯುದ್ಧದ ಭೀತಿ ನಡುವೆಯೂ ಇರಾನ್​ನಿಂದ 1,200 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲಾಗಿದೆ. ಅದ್ರಲ್ಲಿ 996 ಪ್ರಜೆಗಳು ಅರ್ಮೇನಿಯಾವನ್ನು ದಾಟಿದರೆ, 204 ಜನರು ಭೂಮಾರ್ಗವಾಗಿ ಅಜೆರ್ಬೈಜಾನ್‌ಗೆ ಸುರಕ್ಷಿತರಾಗಿ ತೆರಳಿದರು ಎಂದು ತಿಳಿಸಿದರು.

ಘಟನೆ ವೇಳೆ ಸಾವನ್ನಪ್ಪಿದವರಿಗೆ ಭಾರತ ಗೌರವ ಸಲ್ಲಿಸುತ್ತೇವೆ. ಜೊತೆಗೆ ಶಾಂತಿಪಾಲನಾ ಪಡೆಗಳಿಗೆ ಶಾಂತಿ ಕಾಪಾಡುವಂತೆ ಹಾಗೂ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಒತ್ತಾಯಿಸುತ್ತೇವೆ. ವಿಶ್ವಸಂಸ್ಥೆ ಈ ಸಮಸ್ಯೆಯನ್ನು ಪರಿಶೀಲಿಸುತ್ತಿದ್ದು, ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.

ಹಾರ್ಮುಜ್ ಜಲಸಂಧಿಯಲ್ಲಿ ದಾಟುವ ಹಡಗುಗಳಿಗೆ ಸುಂಕ ನೀಡುವ ವಿಚಾರದಲ್ಲಿ ಇರಾನ್ ಯಾವುದೇ ಮಾತುಕತರ್ ನಡೆಸಿಲ್ಲ. ನಮ್ಮ ಆರು ಹಡಗುಗಳು ಇಂಧನ ಹೊತ್ತ ಆಸುರಕ್ಷಿತವಾಗಿ ಬಂದಿವೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !