ಇತ್ತೀಚಿನ ದಿನಗಳಲ್ಲಿ ಟ್ರೆಕ್ಕಿಂಗ್ ಯುವಜನರ ಮನಸನ್ನು ಸೆಳೆದಿರುವ ಪ್ರಮುಖ ಚಟುವಟಿಕೆಗಳಲ್ಲಿ ಒಂದಾಗಿದೆ. ಪ್ರಕೃತಿಯ ಮಡಿಲಲ್ಲಿ ಬೆಟ್ಟ-ಗುಡ್ಡಗಳನ್ನು ಏರಿ ಸುತ್ತಾಡುವುದು ಕೇವಲ ಸಾಹಸಮಯ ಅನುಭವವಷ್ಟೇ ಅಲ್ಲ, ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ದೂರ ಮಾಡುವ ಉತ್ತಮ ಮಾರ್ಗವೂ ಆಗಿದೆ. ವಿಶೇಷವಾಗಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಟ್ರೆಕ್ಕಿಂಗ್ ಮಾಡಿದರೆ ಪ್ರಕೃತಿಯ ನಿಜವಾದ ಸೌಂದರ್ಯವನ್ನು ಅನುಭವಿಸಲು ಸಾಧ್ಯ. ಸ್ನೇಹಿತರೊಂದಿಗೆ ಅಥವಾ ಕುಟುಂಬದೊಂದಿಗೆ ಟ್ರೆಕ್ಕಿಂಗ್ ಮಾಡಿದರೆ ಅದು ಮರೆಯಲಾಗದ ನೆನಪಾಗಿ ಉಳಿಯುತ್ತದೆ.
ಕರ್ನಾಟಕವು ಟ್ರೆಕ್ಕಿಂಗ್ ಪ್ರಿಯರಿಗೆ ನಿಜವಾದ ಖಜಾನೆ. ಇಲ್ಲಿನ ಹಸಿರಿನ ಕಾಡುಗಳು, ಸುಂದರ ಕಣಿವೆಗಳು ಹಾಗೂ ಪಶ್ಚಿಮಘಟ್ಟಗಳ ಪರ್ವತಶ್ರೇಣಿಗಳು ಅನೇಕ ಅದ್ಭುತ ಸ್ಥಳಗಳನ್ನು ಒದಗಿಸುತ್ತವೆ. ಅವುಗಳ ಬಗ್ಗೆ ನಾವು ಹೇಳ್ತಿವಿ ಕೇಳಿ.
ಕುದುರೆಮುಖ
ಚಿಕ್ಕಮಗಳೂರಿನಲ್ಲಿರುವ ಈ ಶಿಖರವು 1894 ಮೀ ಎತ್ತರದಲ್ಲಿದ್ದು, ಕುದುರೆಯ ಮುಖದ ಆಕಾರ ಹೊಂದಿರುವುದರಿಂದಲೇ ಕುದುರೆ ಮುಖ ಎಂಬ ಹೆಸರು ಬಂದಿದೆ. ಹಸಿರಿನ ಕಾಡು ಮತ್ತು ಅದ್ಭುತ ದೃಶ್ಯಾವಳಿಗಳು ಮನಸೆಳೆಯುತ್ತವೆ.

ಬಾಬಾ ಬುಡನ್ ಗಿರಿ
ಚಿಕ್ಕಮಗಳೂರಿನ ಈ ಪರ್ವತ 1930 ಮೀ ಎತ್ತರದಲ್ಲಿದೆ. ಪಶ್ಚಿಮಘಟ್ಟಗಳ ಹಸಿರು ಬೆಟ್ಟಗಳು ಮತ್ತು ಶಾಂತ ವಾತಾವರಣವು ಪ್ರಕೃತಿ ಪ್ರಿಯರಿಗೆ ಸೂಕ್ತ ತಾಣ.

ಮುಳ್ಳಯ್ಯನಗಿರಿ
ಕರ್ನಾಟಕದ ಅತಿ ಎತ್ತರದ ಶಿಖರ (1930 ಮೀ). ಬೆಂಗಳೂರಿನಿಂದ 265 ಕಿ.ಮೀ ದೂರದಲ್ಲಿದ್ದು, ಟ್ರೆಕ್ಕಿಂಗ್ ಪ್ರಿಯರಿಗೆ ರೋಮಾಂಚಕ ಅನುಭವ ನೀಡುತ್ತದೆ.

ಕುಂತಿ ಬೆಟ್ಟ
ಮಂಡ್ಯದ ಪಾಂಡವಪುರದಲ್ಲಿರುವ ಈ ಬೆಟ್ಟವು ಕೃಷಿಭೂಮಿಗಳ ಮಧ್ಯೆ ನೆಲೆಸಿದೆ. ಬೆಟ್ಟ ಏರಿದಾಗ ಕಾಣುವ ಅದ್ಭುತ ದೃಶ್ಯವು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

ಕೊಡಚಾದ್ರಿ ಬೆಟ್ಟ
ಪಶ್ಚಿಮಘಟ್ಟಗಳಲ್ಲಿ 4411 ಅಡಿ ಎತ್ತರದಲ್ಲಿರುವ ಈ ತಾಣ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹಿನ್ನೆಲೆಯಲ್ಲಿದೆ. ಧಾರ್ಮಿಕ ಹಾಗೂ ಸಾಹಸಮಯ ಅನುಭವ ನೀಡುವ ತಾಣ.

ಝಡ್ ಪಾಯಿಂಟ್
ಕೆಮ್ಮಣ್ಣುಗುಂಡಿಯಲ್ಲಿರುವ ಈ ಸ್ಥಳದಲ್ಲಿ 3 ಕಿ.ಮೀ ಟ್ರೆಕ್ ಮಾಡಿ ಜಲಪಾತದ ಸೌಂದರ್ಯವನ್ನು ಕಾಣಬಹುದು. ಸುತ್ತಮುತ್ತಲಿನ ಬೆಟ್ಟಗಳ ದೃಶ್ಯಾವಳಿಗಳು ಮನಮೋಹಕ.