ಎಲ್ಲರಿಗೂ ದಿನದ ಯಾವುದೋ ಒಂದು ಸಮಯದಲ್ಲಿ ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ನೀವು ತಿನ್ನುವ ಆಹಾರ ಹಾಗೂ ತಿನ್ನುವ ಸಮಯವೇ ಮುಖ್ಯ. ನಿಮಗೆ ಗೊತ್ತಿರೋದೇ ಇಲ್ಲ, ಆರೋಗ್ಯಕರ ಎಂದು ನೀವು ದಿನವೂ ಸೇವಿಸುವ ಪದಾರ್ಥವೇ ನಿಮ್ಮ ಹೊಟ್ಟೆ ಉಬ್ಬುವಂತೆ ಮಾಡುತ್ತದೆ. ಯಾವೆಲ್ಲಾ ಪದಾರ್ಥ ನೋಡಿ..
ಬೇಳೆ-ಕಾಳುಗಳು
ಬ್ರೊಕೊಲಿ, ಕೋಸು
ಈರುಳ್ಳಿ
ಬೆಳ್ಳುಳ್ಳಿ
ಹಾಲಿನ ಪದಾರ್ಥಗಳು
ಸಕ್ಕರೆ ಪಾನೀಯಗಳು
ಸೋಡಾ
ಬೀರ್
ಚೂಯಿಂಗ್ ಗಮ್
ಎಣ್ಣೆ ಪದಾರ್ಥಗಳು
ಗ್ಯಾಸ್ ಕಡಿಮೆ ಮಾಡೋಕೆ ಹೀಗೆ ಮಾಡಿ..
ಬೇಳೆ ಕಾಳುಗಳನ್ನು ಬಳಕೆ ಮಾಡುವ ಮುನ್ನ ನೀರಿನಲ್ಲಿ ನೆನೆಸಿಡಿ
ಬಾಯಿ ತೆರೆದು ಜಗಿಯುವ ಅಭ್ಯಾಸ ನಿಲ್ಲಿಸಿ
ಚೂಯಿಂಗ್ ಗಮ್ ಹಾಗೂ ಚಾಕೋಲೆಟ್ ಸೇವನೆ ಬೇಡ
ನಿಧಾನವಾಗಿ ಜಗಿದು ಊಟ ಮಾಡಿ, ಜಾಸ್ತಿ ಗಾಳಿ ಸೇವನೆ ಮಾಡಿ
ನಿಮಗೆ ಗ್ಯಾಸ್ಟ್ರಿಕ್ ಆಗುವ ಕೆಲ ಪದಾರ್ಥಗಳು ಯಾವುದೆಂದು ಗೊತ್ತುಮಾಡಿ, ಅವುಗಳ ಸೇವನೆ ಕಡಿಮೆ ಮಾಡಿ