ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ರಾಮಲಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಕೆಲವೇ ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಎಲ್ಲ ಸೆಲೆಬ್ರಿಟಿಗಳು ಆಹ್ವಾನ ಸ್ವೀಕರಿಸಿದ್ದಾರೆ, ಆದರೆ ಕೆಲವರು ಕಾರ್ಯಕ್ರಮಕ್ಕೆ ಹಾಜರಾಗಿಲ್ಲ. ಯಾರೆಲ್ಲಾ ಬಂದಿಲ್ಲ?
ಪ್ರಭಾಸ್, ಶಾರುಖ್ ಖಾನ್, ದೀಪಿಕಾ ಪಡುಕೋಣ್, ಜ್ಯೂನಿಯರ್ ಎನ್‌ಟಿಆರ್, ಸಲ್ಮಾನ್ ಖಾನ್, ರಣ್‌ವೀರ್ ಸಿಂಗ್ , ಟೈಗರ್ ಶ್ರಾಫ್, ಅಕ್ಷಯ್ ಕುಮಾರ್, ಆಮಿರ್ ಖಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಈ ಎಲ್ಲ ಸೆಲೆಬ್ರಿಟಿಗಳು ಶೂಟಿಂಗ್ ಕಾರಣದಿಂದಾಗಿ, ಬೇರೆ ದೇಶಗಳಲ್ಲಿ ಶೂಟಿಂಗ್ ಮಾಡುತ್ತಿರುವ ಕಾರಣದಿಂದಾಗಿ ಅಯೋಧ್ಯೆಗೆ ಆಗಮಿಸಿಲ್ಲ ಎನ್ನಲಾಗಿದೆ.