ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲಾ ಜೀವಿಗಳಿಗೂ ನೀರು ಅತ್ಯಗತ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಕುಡಿಯುವ ನೀರು ವಿಷವಾಗುತ್ತಿದೆಯೇ ಅನ್ನೋ ಆತಂಕ ಶುರುವಾಗಿದೆ.
ರಾಜ್ಯದಲ್ಲಿ ಪೂರೈಕೆಯಾಗುತ್ತಿರುವ ಮಿನರಲ್ ವಾಟರ್ ಬಾಟಲ್‌ಗಳಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿರುವುದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ವರದಿಯಿಂದ ಬೆಳಕಿಗೆ ಬಂದಿದೆ.
ಸುಮಾರು 160 ಮಿನರಲ್ ವಾಟರ್ ಬಾಟಲ್‌ಗಳನ್ನ ಸ್ಯಾಂಪಲ್ ಟೆಸ್ಟ್‌ಗೆ ಕಳುಹಿಸಿತ್ತು. ಈ ಪೈಕಿ 100ಕ್ಕೂ ಹೆಚ್ಚು ಬಾಟಲ್‌ಗಳ ವರದಿ ಕೈಸೇರಿದ್ದು, 50% ನೀರು ಕುಡಿಯಲು ಅನ್‌ಸೇಫ್ ಆಗಿದೆ. ಲೋಕಲ್ ಮಿನರಲ್ ವಾಟರ್ ಕುಡಿಯಲು ಅನರ್ಹ ಎಂದು ರಿಪೋರ್ಟ್ ಬಂದಿದೆ.
ವರದಿಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ತುಂಬಾ ಸಮಯದಿಂದ ನೀರು ಶೇಖರಣೆ ಮಾಡುವುದರಿಂದ ಪಾಚಿ ಅಂಶಗಳು ಕಂಡುಬಂದಿವೆ. ಕೆಲ ಕಂಪನಿಗಳು ಕಲುಷಿತ ನೀರು, ಬೋರ್ವೆಲ್ ನೀರನ್ನು ಬಾಟಲ್ ಮೂಲಕ ಮಾರಾಟ ಮಾಡುತ್ತಿರುವುದನ್ನು ಆಹಾರ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.