ಚಳಿಗಾಲ ಬಂದರೆ ಮನೆಯಲ್ಲಿ ತಂಪು ಹೆಚ್ಚಾಗುವುದು ಸಹಜ. ಉಣ್ಣೆಯ ಬಟ್ಟೆಗಳು, ಕಂಬಳಿಗಳು, ಹೀಟರ್‌ಗಳು ಎಲ್ಲಾನೂ ok! ಆದರೆ ನಿಮ್ಮ ಮನೆಯನ್ನು ನೈಸರ್ಗಿಕವಾಗಿ ಬೆಚ್ಚಗಿಡಲು ಕೆಲವು ಅದ್ಭುತ ಒಳಾಂಗಣ ಸಸ್ಯಗಳೂ ಸಹಕಾರಿಯಾಗುತ್ತವೆ ಎನ್ನುವುದನ್ನು ಬಹುತೇಕ ಮಂದಿ ಗಮನಿಸುತ್ತಲೇ ಇಲ್ಲ. ಈ ಸಸ್ಯಗಳು ಗಾಳಿಯ ಗುಣಮಟ್ಟವನ್ನು ಸುಧಾರಿಸುವುದಲ್ಲದೇ ವಾತಾವರಣದ ತೇವಾಂಶವನ್ನು ಸಮತೋಲನಗೊಳಿಸಿ ಕೋಣೆಗೆ ಉಷ್ಣತೆಯನ್ನು ನೀಡುತ್ತವೆ.
ಪೀಸ್ ಲಿಲ್ಲಿ (Peace Lily):
ಈ ಸಸ್ಯವು ಗಾಳಿಯಲ್ಲಿ ಇರುವ ತೇವಾಂಶವನ್ನು ಹೀರಿಕೊಳ್ಳುವ ಮೂಲಕ ಕೋಣೆಯ ಶಾಖವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಬಿಳಿ ಹೂವುಗಳು ಮನೆಯಲ್ಲಿ ನೆಮ್ಮದಿಯ ವಾತಾವರಣವನ್ನು ನೀಡುತ್ತವೆ. ನೇರ ಸೂರ್ಯನ ಬೆಳಕಿನಿಂದ ದೂರವಿಡಿ ಮತ್ತು ಮಣ್ಣು ಸ್ವಲ್ಪ ತೇವವಾಗಿರಲಿ.

ಮನಿ ಪ್ಲಾಂಟ್ (Money Plant):
ಹಸಿರು ಎಲೆಗಳ ತುಸು ಹೊಳಪು ಕೋಣೆಗೆ ಬೆಚ್ಚಗಿನ ಲುಕ್ ಕೊಡುತ್ತದೆ. ಕಡಿಮೆ ಬೆಳಕಿನಲ್ಲೂ ಬೆಳೆಯುವ ಈ ಸಸ್ಯವು ಗಾಳಿಯ ತೇವಾಂಶವನ್ನು ಕಾಪಾಡುತ್ತದೆ. ಕಿಟಕಿಯ ಹತ್ತಿರ ಇಡುವುದು ಉತ್ತಮ.

ಸ್ನೇಕ್ ಪ್ಲಾಂಟ್ (Snake Plant):
ರಾತ್ರಿ ಸಮಯದಲ್ಲಿ ಆಮ್ಲಜನಕ ಬಿಡುಗಡೆ ಮಾಡುವ ಅಪರೂಪದ ಸಸ್ಯ. ಕಡಿಮೆ ಬೆಳಕು ಮತ್ತು ಕಡಿಮೆ ನೀರಿನಲ್ಲೇ ಬದುಕಬಲ್ಲದು. ಚಳಿಗಾಲಕ್ಕೆ ಅತ್ಯುತ್ತಮ ಆಯ್ಕೆ.

ಸ್ಪೈಡರ್ ಪ್ಲಾಂಟ್ (Spider Plant):
ಗಾಳಿಯಲ್ಲಿರುವ ಹಾನಿಕಾರಕ ಅನಿಲಗಳನ್ನು ಹೀರಿಕೊಳ್ಳುತ್ತದೆ. ಚಳಿಗಾಲದಲ್ಲಿ ಮನೆಯನ್ನು ತಾಜಾ ಮತ್ತು ಉಷ್ಣವಾಗಿಡಲು ಸಹಕಾರಿ. ನಿಯಮಿತವಾಗಿ ಎಲೆಗಳನ್ನು ಕತ್ತರಿಸುವುದು ಅಗತ್ಯ.

ಅರೆಕಾ ಪಾಮ್ (Areca Palm):
ಗಾಳಿಯನ್ನು ಶುದ್ಧೀಕರಿಸಿ ಕೋಣೆಯ ಉಷ್ಣತೆ ಹೆಚ್ಚಿಸಲು ಸಹಾಯಕ. ವಾಸದ ಕೋಣೆಯ ಮೂಲೆಗಳಲ್ಲಿ ಇಟ್ಟರೆ ಸೌಂದರ್ಯವೂ ಹೆಚ್ಚುತ್ತದೆ.


