ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್‌ನ 68ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಾಡಲಿದೆ. ಮೇ 18 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಉಭಯ ತಂಡಗಳ ಒಟ್ಟು 5 ಆಟಗಾರರು ಗೈರು ಹಾಜರಾಗಲಿದ್ದಾರೆ.
ಈ ಐವರು ಆಟಗಾರರಲ್ಲಿ ಮೂವರು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಮತ್ತು ಇಬ್ಬರು ಆರ್‌ಸಿಬಿ ಆಟಗಾರರು. ಹೀಗಾಗಿ ಮುಂಬರುವ RCB-CSK ಪಂದ್ಯದಲ್ಲಿ ಈ ಆಟಗಾರರು ಆಡುವುದಿಲ್ಲ. ಹಾಗಿದ್ರೆ ಈ ಆಟಗಾರರು ಯಾರು?
ಚೆನ್ನೈ ಸೂಪರ್ ಕಿಂಗ್ಸ್ ಆಲ್ ರೌಂಡರ್ ಮೊಯಿನ್ ಅಲಿ ಇಂಗ್ಲೆಂಡ್ ಟಿ20 ತಂಡದಲ್ಲಿದ್ದಾರೆ. ಮೇ 21ರಂದು ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಟಿ20 ಸರಣಿ ಆರಂಭವಾಗಲಿದ್ದು, ಅದಕ್ಕೂ ಮುನ್ನ ತಂಡವನ್ನು ಆಯ್ಕೆ ಮಾಡುವಂತೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ಮೊಯಿನ್ ಅಲಿ ಸಿಎಸ್‌ಕೆ ತಂಡವನ್ನು ತೊರೆಯಲಿದ್ದಾರೆ.
ಆರ್‌ಸಿಬಿಯ ಸ್ಫೋಟಕ ಬ್ಯಾಟ್ಸ್ ಮ್ಯಾನ್ ವಿಲ್ ಜಾಕ್ಸ್ ಈಗಾಗಲೇ ಇಂಗ್ಲೆಂಡ್‌ಗೆ ತೆರಳಿದ್ದಾರೆ. ಜಾಕ್ಸ್ ಅವರು ಇಂಗ್ಲೆಂಡ್ T20 ತಂಡದ ಭಾಗವಾಗಿರುವುದರಿಂದ ಪಾಕಿಸ್ತಾನ ವಿರುದ್ಧದ ಸರಣಿಗೆ RCB ತಂಡವನ್ನು ತೊರೆದರು.
ಚೆನ್ನೈ ಸೂಪರ್ ಕಿಂಗ್ಸ್ ಎಡಗೈ ಸ್ಪಿನ್ನರ್ ಮುಸ್ತಫಿಜುರ್ ರೆಹಮಾನ್ ಈಗಾಗಲೇ ಸಿಎಸ್‌ಕೆ ತೊರೆದಿದ್ದಾರೆ. ಬಾಂಗ್ಲಾದೇಶ ಮೇ 21 ರಿಂದ USA ವಿರುದ್ಧ T20 ಸರಣಿಯನ್ನು ಆಡಲಿದೆ, ಆದ್ದರಿಂದ ಮುಸ್ತಫಿಜುರ್ ರೆಹಮಾನ್ CSKಯ ಮುಂದಿನ ಪಂದ್ಯಗಳಿಗೆ ಲಭ್ಯವಿರುವುದಿಲ್ಲ.
ಆರ್ ಸಿಬಿ ತಂಡದಲ್ಲಿದ್ದ ಇಂಗ್ಲೆಂಡ್ ಆಟಗಾರ ರೀಸ್ ಟೋಪ್ಲಿ ಕೂಡ ತವರಿಗೆ ಮರಳಿದ್ದಾರೆ. ಮೇ 21ರಿಂದ ಆರಂಭವಾಗಲಿರುವ ಪಾಕಿಸ್ತಾನ ವಿರುದ್ಧದ ಸರಣಿಗೆ ಟೋಪ್ಲಿ ತವರಿಗೆ ಮರಳಲಿದ್ದಾರೆ.
ಶ್ರೀಲಂಕಾ ತಂಡವು ಟಿ20 ವಿಶ್ವಕಪ್ಗಾಗಿ ಯುಎಸ್ಎನತ್ತ ಪ್ರಯಾಣ ಬೆಳೆಸಿದೆ. ಈ ತಂಡದಲ್ಲಿ ಮಥೀಶ ಪತಿರಾಣ ಕೂಡ ಇದ್ದು, ಹೀಗಾಗಿ ಸಿಎಸ್‌ಕೆ ತಂಡದ ಮುಂದಿನ ಪಂದ್ಯಗಳಿಗೆ ಪತಿರಾಣ ಕೂಡ ಅಲಭ್ಯರಾಗಿದ್ದಾರೆ.