ಹೊಸ ದಿಗಂತ ಡಿಜಿಟಲ್ ಡೆಸ್ಕ್
ಯಾವುದೇ ರೆಸಿಪಿಯಲ್ಲಿ, ಹದವಾಗಿ ಕತ್ತರಿಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿ ತುಂಡನ್ನು ಒಟ್ಟಾಗಿ ಬೇಯಿಸಿಕೊಳ್ಳಿ ಎಂಬ ಸೂಚನೆ ಇದ್ದರೆ ನೀವು ಪಾಲಿಸಲೇಬೇಕಾದ ಸಂಗತಿ ಒಂದಿದೆ. ಅದೆಂದರೆ, ಈರುಳ್ಳಿಯನ್ನು ಮೊದಲಿಗೆ ಬೇಯಿಸಿಕೊಳ್ಳಿ. ಅವು ಬಣ್ಣ ಬದಲಿಸಿ ಬೇಯುತ್ತಿರುವ ಸೂಚನೆ ಕೊಟ್ಟ ನಂತರವಷ್ಟೇ ಬೆಳ್ಳುಳ್ಳಿ ಚೂರುಗಳನ್ನು ಹಾಕಿ. ಕಾರಣವಿಷ್ಟೆ. ಬೆಳ್ಳುಳ್ಳಿ ಅತಿ ಕಡಿಮೆ ಸಮಯದಲ್ಲೇ ಬೇಯುತ್ತದೆ. ಈರುಳ್ಳಿ ಬೇಯುವಷ್ಟೂ ಹೊತ್ತೂ ಬೆಳ್ಳುಳ್ಳಿ ಚೂರುಗಳನ್ನೂ ಕಡಾಯಿಯಲ್ಲಿ ತಿರುವಿಸುತ್ತಿದ್ದರೆ ಅವು ಸೀದು ಹೋಗುವ ಸಾಧ್ಯತೆ ಹೆಚ್ಚು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ