ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿನ್ನೋಕೆ ಊಟ, ಮಲ್ಗೋಕೆ ಹಾಸಿಗೆ ಎಲ್ಲಾ ಸಿಗತ್ತೆ ಅಂತ ಪ್ರತಿಭಟನೆ ಮಾಡ್ತಿದಾರೆ ಎಂದು ವಿಪಕ್ಷಗಳ ಅಹೋರಾತ್ರಿ ಪ್ರತಿಭಟನೆ ಬಗ್ಗೆ ಶಾಸಕ ಲಕ್ಷ್ಮಣ್ ಸವದಿ ವ್ಯಂಗ್ಯ ಮಾಡಿದ್ದಾರೆ.
ನಿಜವಾದ ಹೋರಾಟ ಮಾಡುವುದಾದರೆ ಮೊದಲಿನಿಂದ ಮಾಡುತ್ತಿದ್ದರು. ಈಗ ಊಟ ಕೊಡ್ತಾರೆ, ಹಾಸಿಗೆ ಕೊಡ್ತಾರೆ ಎಂದು ಮಲಗಿ ಹೋಗೋಣ ಅಂತಾ ಪ್ರತಿಭಟನೆ ಮಾಡ್ತಿದ್ದಾರೆ. ಮುಡ ಹಗರಣ ನಡೆದಿದೆ ಎನ್ನುತ್ತಿರುವುದು ಯಾವಾಗ? ಹಗರಣ ನಡೆದಿದ್ದರೆ ಯಾರ ಅವಧಿ? ಈಗ ಯಾಕೆ ಆರೋಪ ಮಾಡ್ತಿದ್ದಾರೆ? ಅವರೆ ಸಿಎಂ ಆಗಿದ್ದರು, ಕಂದಾಯ ಸಚಿವರು ಆಗಿದ್ದರು. ಆಗ ಏನು ಮಾಡುತ್ತಿದ್ದರು? ದೊಡ್ಡ ಹಗರಣ ಆಗಿದ್ದರೆ ಮೊದಲೇ ಯಾಕೆ ತಡೆಯಲಿಲ್ಲ. ಕೊನೆಯೆ ಎರಡು ದಿನ ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.