ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮನೆ ಹತ್ರನೇ ಇದೆ ಕಣೋ ಬಾರೋ ಎಂದು ಪ್ರೀತಿಯಿಂದ ಅಣ್ಣ ಕರೆದಿದ್ದರು, ಆಗ ಹೋಗೋಕೆ ಆಗಿರಲಿಲ್ಲ. ಈಗ ಹೋಗಬೇಕು ಎನ್ನಿಸುತ್ತಿದೆ. ಆದರೆ ಅವರೇ ಇಲ್ಲ..
ಹಾಸ್ಯನಟ ಟೆನ್ನಿಸ್ ಕೃಷ್ಣ ಕಣ್ಣೀರ ನುಡಿಗಳಿವು.. ನಾವಿಬ್ಬರೂ ಅಣ್ಣ-ತಮ್ಮಂದಿರ ರೀತಿ ಇದ್ದೆವು. ಈಗ ಅವರಿಲ್ಲ ಎಂದರೆ ನಂಬೋದಕ್ಕೆ ಆಗುತ್ತಿಲ್ಲ ಎಂದಿದ್ದಾರೆ.
ಎಲ್ಲ ನಟರ ಜೊತೆಗೆ ಪಾತ್ರ ಮಾಡಿದ್ದಾರೆ. ನಾನು ಕೂಡ ಬಹಳಷ್ಟು ಸಿನಿಮಾ ಮಾಡಿದ್ದೇನೆ. ಬಹಳ ವರ್ಷಗಳ ಹಿಂದೆ ಓಪನ್ ಹಾರ್ಟ್ ಸರ್ಜರಿ ಆಗಿತ್ತು. ಆನಂತರ ಚೇತರಿಸಿಕೊಂಡಿದ್ದರು. ಸಾವಿನ ಅರ್ಧ ಗಂಟೆ ಹಿಂದಷ್ಟೇ ಅವರನ್ನು ನೆನಪಿಸಿಕೊಂಡೆ. ಯಾವುದಾದರೂ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಬಹುದಾ ಅಂತ ಯೋಚಿಸಿದ್ದೇ. ಕಡೆಯಾಗಿ ಕಾರ್ಯಕ್ರಮಲ್ಲಿ ಭೇಟಿಯಾಗಿದ್ದೆವು.
ಇನ್ನೂ, ಚಿತ್ರರಂಗಕ್ಕೆ ಪಾದಾರ್ಪನೆ ಮಾಡಿದ ಸಂದರ್ಭದಲ್ಲಿ ನಟ ಜಗ್ಗೇಶ್ ಜತೆ ಬ್ಯಾಂಕ್ ಜನಾರ್ಧನ್ ಹೆಚ್ಚು ಕಾಲ ಕಳೆದಿದ್ದರು. ಜಗ್ಗೇಶ್ ಬಹುತೇಕ ಚಿತ್ರಗಳಲ್ಲಿ ನಟಿಸಿರುವ ಬ್ಯಾಂಕ್ ಜನಾರ್ಧನ್ ನಟಿಸಿದ್ದಾರೆ. ಜಗ್ಗೇಶ್ಗೆ ತಂದೆಯಾಗಿ ನಟಿಸಿದ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದ್ದವು. ಸೂಪರ್ನನ್ ಮಗ, ತರ್ಲೆ ನನ್ ಮಗ ಚಿತ್ರದಲ್ಲಿ ತಂದೆಯಾಗಿ ನಟಸಿದ್ದರು. ಹಾಸ್ಯಕ್ಕೆ ಕನ್ನಡದಲ್ಲಿ ಮುಸರಿ ಕೃಷ್ಣಮೂರ್ತಿ, ನರಸಿಂಹರಾಜು ಬಳಿಕ ಅವರ ಸ್ಥಾನವನ್ನ ತುಂಬಿದ್ದರು.