Thursday, January 29, 2026
Thursday, January 29, 2026
spot_img

ಬಂದರು…ಬಂದರು ಮತ್ತೆ ಶೆಟ್ರು ಬಂದರು: ‘ರಕ್ಕಸಪುರದೋಳ್’ ಟ್ರೈಲರ್‌ ರಿಲೀಸ್, ಹೇಗಿದೆ ನೋಡಿ ರಾಜ್ ಬಿ ಶೆಟ್ಟಿ ಹೊಸ ಲುಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಅಭಿನಯನದ ‘ರಕ್ಕಸಪುರದೊಳ್’ ಸಿನಿಮಾ ಟ್ರೈಲರ್‌ ಔಟ್‌ ಆಗಿದೆ. ಸಖತ್ ಮಾಸ್ ಪೊಲೀಸ್ ಅಧಿಕಾರಿಯಾಗಿ ಎಂಟ್ರಿಕೊಟ್ಟಿದ್ದಾರೆ.

‘ರಕ್ಕಸಪುರದೊಳ್’ ಸಿನಿಮಾದ ಹೆಸರೇ ಹೇಳುವಂತೆ ಇದು ಒಂದು ಊರಿನ ಕತೆ,. ‘ರಕ್ಕಸಪುರದೊಳ್’ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಆಕ್ಷನ್ ಮತ್ತು ಕಾಮಿಡಿ ಕೂಡ ಇದೆ. ಸಖತ್ ಆಕ್ಷನ್ ದೃಶ್ಯಗಳ ತುಣುಕುಗಳನ್ನು ತೋರಿಸಲಾಗಿದೆ.

ಕೊಲೆಗಳ ತನಿಖೆಯನ್ನು ನಡೆಸಲು ಬರುವ ಪೊಲೀಸ್ ಅಧಿಕಾರಿ ರಾಜ್ ಬಿ ಶೆಟ್ಟಿ. ಆದ್ರೆ ಅವರನ್ನ ನೋಡಿ ಪೊಲೀಸ್‌ ಹೌದಾ ಅನ್ನೋದೇ ಅಲ್ಲಿ ಇರೋರಿಗೆ ಅನುಮಾನ. ಸಮವಸ್ತ್ರ ಧರಿಸಿಲ್ಲ. ಗಡ್ಡ ಬಿಟ್ಟ, ಸದಾ ಕುಡಿಯುವ ರೀತಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ನಿರ್ಮಾಣ ಮಾಡಿರುವುದು ಕೆಎನ್ ಎಂಟರ್ಪೈಸಸ್​​ನ ರವಿ ವರ್ಮಾ, ಕೆವಿಎನ್ ಪ್ರೊಡಕ್ಷನ್ಸ್​​ ನವರು ಸಿನಿಮಾವನ್ನು ಪ್ರೆಸೆಂಟ್ ಮಾಡಿದ್ದಾರೆ. ನಿರ್ದೇಶಕ ರವಿ ಸಾರಂಗ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ ರಕ್ಕಸಪುರದೋಳ್ ಸಿನಿಮಾ ಫೆ.6 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !