ಇವರಿಗೂ ಕೂಡ ಕುಂಭ ಸ್ನಾನದ ಸೌಭಾಗ್ಯ: 90,000 ಕ್ಕೂ ಹೆಚ್ಚು ಕೈದಿಗಳ ಪಾಪ ತೊಳೆಯಲು ಮುಂದಾದ ಯುಪಿ ಸರ್ಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪ್ರಯಾಗ್​ರಾಜ್​ನ ತ್ರಿವೆಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ 60 ಕೋಟಿಗೂ ಅಧಿಕ ಜನರು ಪುಣ್ಯ ಸ್ನಾನ ಮಾಡಿದ್ದಾರೆ. ಆದರಂತೆ ಇದೀಗ ಪಾಪಿಗಳೇ ತುಂಬಿರುವ ಜೈಲಿನಲ್ಲಿಯೂ ಸಹ ಕುಂಭ ಸ್ನಾನ ನಡೆಸಲು ಉತ್ತರ ಪ್ರದೇಶ ಸರ್ಕಾರ ಬೃಹತ್​ ಪ್ಲಾನ್​​ವೊಂದನ್ನು ಮಾಡಿದೆ. ಈ ಮೂಲಕ ಅಂದಾಜು 90 ಸಾವಿರಕ್ಕೂ ಅಧಿಕ ಕೈದಿಗಳ ಪಾಪವಿಮೊಚನಗೆ ಪ್ಲಾನ್​ ಮಾಡಲಾಗಿದೆ.

ಉತ್ತರ ಪ್ರದೇಶದ ಜೈಲು ಆಡಳಿತವು ಪ್ರಯಾಗ್‌ರಾಜ್‌ನತ ತ್ರೀವೆಣಿ ಸಂಗಮದಿಂದ ರಾಜ್ಯಾದ್ಯಂತ 75 ಜೈಲುಗಳಿಗೆ ಪವಿತ್ರ ಜಲವನ್ನು ತರಲು ವ್ಯವಸ್ಥೆ ಮಾಡುತ್ತಿದೆ, ಇದರಿಂದಾಗಿ ಕೈದಿಗಳು ಮಹಾ ಕುಂಭದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಾಂಗುತ್ತದೆ.

ಇನ್ನು ಉತ್ತರ ಪ್ರದೇಶದ ಜೈಲು ಸಚಿವರಾದ ದಾರಾ ಸಿಂಗ್ ಚೌಹಾಣ್ ಅವರ ಕಚೇರಿಯ ಪ್ರಕಾರ, ಫೆಬ್ರವರಿ 21 ರಂದು ಬೆಳಿಗ್ಗೆ 9.30 ರಿಂದ ಬೆಳಿಗ್ಗೆ 10 ರವರೆಗೆ ಎಲ್ಲಾ ಜೈಲುಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ರಾಜ್ಯಾದ್ಯಂತ ಏಳು ಕೇಂದ್ರ ಕಾರಾಗೃಹಗಳು ಸೇರಿದಂತೆ 75 ಜೈಲುಗಳಲ್ಲಿ 90,000 ಕ್ಕೂ ಹೆಚ್ಚು ಕೈದಿಗಳನ್ನು ಪ್ರಸ್ತುತ ಇರಿಸಲಾಗಿದೆ ಎಂದು ಜೈಲು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಕುರಿತು ಪ್ರತಿಕ್ರಿಯಿಸಿರುವ ಕಾರಾಗೃಹಗಳ ಮಹಾನಿರ್ದೇಶಕ (ಡಿಜಿ) ಪಿವಿ ರಾಮಶಾಸ್ತ್ರಿ ಅವರು, ಜೈಲು ಸಚಿವರ ಮೇಲ್ವಿಚಾರಣೆಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಸಂಗಮದಿಂದ ಪವಿತ್ರ ನೀರನ್ನು ಎಲ್ಲಾ ಜೈಲುಗಳಿಗೆ ತರಲಾಗುತ್ತದೆ ಮತ್ತು ಸಾಮಾನ್ಯ ನೀರಿನೊಂದಿಗೆ ಬೆರೆಸಿ ಜೈಲು ಆವರಣದೊಳಗಿನ ಸಣ್ಣ ತೊಟ್ಟಿಯಲ್ಲಿ ಸಂಗ್ರಹಿಸಲಾಗುತ್ತದೆ. ಪ್ರಾರ್ಥನೆಯ ನಂತರ ಎಲ್ಲಾ ಕೈದಿಗಳು ನೀರಿನಲ್ಲಿ ಸ್ನಾನ ಮಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಫೆಬ್ರವರಿ 21 ರಂದು ಲಕ್ನೋ ಜೈಲಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಚಿವ ಚೌಹಾಣ್, ಹಿರಿಯ ಜೈಲು ಅಧಿಕಾರಿಗಳೊಂದಿಗೆ ಭಾಗವಹಿಸುವ ನಿರೀಕ್ಷೆಯಿದೆ. ಏತನ್ಮಧ್ಯೆ ಪ್ರಯಾಗ್‌ರಾಜ್‌ನ ಸಂಗಮದಿಂದ ಪವಿತ್ರ ಜಲವನ್ನು ಸಂಗ್ರಹಿಸಲು ಜೈಲು ಆಡಳಿತವು ಜೈಲು ಸಿಬ್ಬಂದಿ ಅರುಣ್ ಮೌರ್ಯ ಅವರನ್ನು ಕಳುಹಿಸಿದೆ ಎಂದು ಗೋರಖ್‌ಪುರ ಜಿಲ್ಲಾ ಜೈಲು ಜೈಲರ್ ಎ.ಕೆ. ಕುಶ್ವಾಹ ಹೇಳಿದ್ದಾರೆ.

ಇನ್ನು ಪ್ರಯಾಗ್‌ರಾಜ್‌ನ ನೈನಿ ಕೇಂದ್ರ ಕಾರಾಗೃಹದ ಹಿರಿಯ ಸೂಪರಿಂಟೆಂಡೆಂಟ್ ರಂಗ್ ಬಹದ್ದೂರ್ ಅವರು ಫೆಬ್ರವರಿ 21 ರಂದು ಕೈದಿಗಳಿಗೂ ಇದೇ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಹೇಳಿದ್ದಾರೆ..ಪ್ರಯಾಗ್‌ರಾಜ್ ಜಿಲ್ಲಾ ಕಾರಾಗೃಹದ ಹಿರಿಯ ಸೂಪರಿಂಟೆಂಡೆಂಟ್ ಅಮಿತಾ ದುಬೆ ಅವರು ಸುಮಾರು 1,350 ಕೈದಿಗಳು ಸ್ನಾನದ ಕುರಿತು ಉತ್ಸುಕರಾಗಿದ್ದಾರೆ ಎಂದು ದೃಢಪಡಿಸಿದರು. ಯಾಕೆಂದರೆ ಅವರು ತಮ್ಮ ಬಂಧನದ ಹೊರತಾಗಿಯೂ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಪಡೆಯುತ್ತಾರೆ ಎನ್ನುವುದಾಗಿದೆ.

ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಮಹಾ ಕುಂಭಮೇಳ ಫೆಬ್ರವರಿ 26 ರಂದು ಮುಕ್ತಾಯಗೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!