ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನಾಭರಣ ಅಥವಾ ದುಬಾರಿ ವಸ್ತುಗಳನ್ನು ಕದಿಯುವುದನ್ನು ನೋಡಿದ್ದೇವೆ. ಆದರೆ ಬೆಣ್ಣೆನಗರಿಯಲ್ಲಿ ಕಳ್ಳರ ಗ್ಯಾಂಗೊಂದು ಹೋಲ್‌ಸೇಲ್ ಕಿರಾಣಿ ಅಂಗಡಿ ಎದುರು ಇರಿಸಿದ್ದ ಉಪ್ಪಿನ ಚೀಲಗಳನ್ನು ಕದ್ದಿರುವ ಘಟನೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ನಡೆದಿದೆ.
ಹರಿಹರದ ಕೆ.ಆರ್. ನಗರ ಸೇರಿ ವಿವಿಧ ಕಿರಾಣಿ ಅಂಗಡಿಗಳ ಎದುರು ಇಟ್ಟಿದ್ದ ಉಪ್ಪಿನ ಚೀಲಗಳನ್ನು ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಇಬ್ಬರು ಕಳ್ಳರು ಕಳ್ಳತನ ಮಾಡಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಾಗಿದ್ದು ಹರಿಹರ ನಗರ ಠಾಣೆಯ ಪೊಲೀಸರು ಉಪ್ಪು ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ. ಘಟನೆಯಿಂದ ಉಳಿದ ಬೇರೆ ಕಿರಾಣಿ ಅಂಗಡಿಯ ಮಾಲೀಕರು ಉಪ್ಪನ್ನು ಹೊರಗಿರಿಸಲು ಹಿಂದೇಟು ಹಾಕುತ್ತಿದ್ದಾರೆ.

