ಹೊಸದಿಗಂತ ವರದಿ,ಕಾರವಾರ:
ತಾಲೂಕಿನ ಅಮದಳ್ಳಿಯ ಪ್ರಸಿದ್ಧ ವೀರ ಮಹಾಗಣಪತಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೆಳ್ಳಿಯ ಮುಖವಾಡ ಕಳ್ಳತನ ಮಾಡಿದ ಘಟನೆ ಸೋಮವಾರ ಮಧ್ಯರಾತ್ರಿಯ ನಂತರ 2 ಗಂಟೆ ಸುಮಾರಿಗೆ ನಡೆದಿದೆ.
ಉದ್ಬವ ಗಣಪತಿ ವಿಗ್ರಹಕ್ಕೆ ಹಾಕಲಾಗಿದ್ದ ಸುಮಾರು 5 ಕೆ.ಜಿ ತೂಕದ ಬೆಳ್ಳಿ ಮುಖವಾಡವನ್ನು ದೇವಸ್ಥಾನದ ಗ್ರಿಲ್ಸ್ ಶಟರ್ಸ್ ಮುರಿದು ಗರ್ಭಗುಡಿಯ ಬಾಗಿಲ ಬೀಗ ಒಡೆದು ಕಳ್ಳತನ ಮಾಡಲಾಗಿದ್ದು ರವಿವಾರ ಸಂಕಷ್ಟಿ ಪೂಜೆ ನಡೆದು ದೇವಾಲಯದ ಬಾಗಿಲು ಹಾಕಿ ತೆರಳಿದ ನಂತರ ಘಟನೆ ನಡೆದಿದೆ.
ಕಾರವಾರ ಗ್ರಾಮೀಣ ಠಾಣೆ ಪೊಲೀಸರು,ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.