ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ತಿಮ್ಮಪ್ಪನಿಗೆ ಕೋಟಿ ಕೋಟಿ ದೇಣಿಗೆ ಬರೋದು ಸಾಮಾನ್ಯ ಆದರೆ ಇಲ್ಲೊಬ್ಬರು ತಿರುಮಲ–ತಿರುಪತಿ ದೇವಸ್ಥಾನದ (TTD) “ಶ್ರವಣಂ” ಯೋಜನೆಗೆ ಸುಮಾರು 20 ಲಕ್ಷ, ಮೌಲ್ಯದ 105 ಹಿಯರಿಂಗ್ ಎಯ್ಡ್‌ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ತಿರುಪತಿಯ ಎನ್. ವಿರಾಟ್ ಹೆಸರಿನಲ್ಲ ಈ ದೇಣಿಗೆ ನೀಡಲಾಗಿದೆ. ವಿರಾಟ್ ಅವರ ತಂದೆ ಅಮರ್ ನಾಗರಾರಂ, ಸಾಧನಗಳನ್ನು ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಸಿಂಗ್‌ಗಲ್ ಅವರಿಗೆ ಹಸ್ತಾಂತರಿಸಿದರು.
ಈ ಹಿಯರಿಂಗ್ ಎಯ್ಡ್‌ಗಳನ್ನು “ಶ್ರವಣಂ” ಯೋಜನೆಯಡಿಯಲ್ಲಿ ತರಬೇತಿ ಪೂರ್ಣಗೊಳಿಸಿದ ಮಕ್ಕಳಿಗೆ ವಿತರಿಸಲಾಗುವುದು ಎಂದು ಟಿಟಿಡಿ ತಿಳಿಸಿದೆ.
ಆಂಧ್ರಪ್ರದೇಶ ಸರ್ಕಾರದ ಅಧೀನದಲ್ಲಿರುವ ಟಿಟಿಡಿ ಟ್ರಸ್ಟ್‌ವು ತಿರುಮಲ ವೆಂಕಟೇಶ್ವರ ದೇವಾಲಯ ಸೇರಿದಂತೆ ಹಲವು ದೇವಾಲಯಗಳ ಆಡಳಿತ ನೋಡಿಕೊಳ್ಳುತ್ತದೆ. 2006ರಲ್ಲಿ ಆರಂಭವಾದ “ಶ್ರವಣಂ” ಯೋಜನೆ, ಶ್ರವಣ ತೊಂದರೆ ಹೊಂದಿರುವ ಮಕ್ಕಳಿಗೆ ಪರೀಕ್ಷೆ ಮತ್ತು ಥೆರಪಿ ಒದಗಿಸುವ ಪ್ರಮುಖ ಸೇವಾ ಕಾರ್ಯವಾಗಿದೆ.

