ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಯಾಲಿಫೋರ್ನಿಯಾದಲ್ಲಿ ಹೊಸ ಮಸೂದೆಯ ಪ್ರಕಾರ ಪಬ್ಲಿಕ್ ಸ್ಕೂಲ್ಗಳಲ್ಲಿ ಡೊರಿಟೋಸ್ ಹಾಗೂ ಚೀಟೋಸ್ ಬ್ಯಾನ್ ಮಾಡುವ ಬಗ್ಗೆ ಚಿಂತನೆ ನಡೆದಿದೆ.
ಇದೊಂದು ಫೇಮಸ್ ಸ್ನ್ಯಾಕ್ ಆಗಿದ್ದು,ಮಕ್ಕಳು ಇಷ್ಟಪಟ್ಟು ತಿನ್ನುವ ತಿಂಡಿ ಆಗಿದೆ. ಇದರಲ್ಲಿ ಕೃತಕ ರಾಸಾಯನಿಕಗಳು ಹಾಗೂ ಬಣ್ಣಗಳನ್ನು ಹಾಕಿರುವ ಕಾರಣ ಸ್ಕೂಲ್ ಒಳಗೆ ಸ್ನ್ಯಾಕ್ಸ್ ನಿಷೇಧಿಸುವ ಸಾಧ್ಯತೆ ಇದೆ.
ಮಸೂದೆ ಜಾರಿಯಾದರೆ ಕೆಂಪು, ಹಳದಿ, ನೀಲಿ, ಮತ್ತು ಹಸಿರು ಸೇರಿದಂತೆ ಆರು ಸಿಂಥೆಟಿಕ್ ಬಣ್ಣಗಳಿರುವ ಚಿಪ್ಸ್ ನಿಷೇಧಿಸಲಾಗುತ್ತದೆ.