ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೇ ರಾತ್ರಿಯಲ್ಲಿ ಮೂರು ಬಾರಿ ಭೂಮಿ ನಡುಗಿದ ಅನುಭವ ಮಯನ್ಮಾರ್‌ನಲ್ಲಿ ನಿನ್ನೆ ನಡೆದಿದೆ.
ಮಯನ್ಮಾರ್‌ನ ಯಾಂಗೋನ್‌ನಲ್ಲಿ ಬುಧವಾರ ರಾತ್ರಿ 4.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಮೊದಲ ಭೂಕಂಪವು ರಾತ್ರಿ 11.56ಕ್ಕೆ 25 ಕಿಮೀ ಆಳದಲ್ಲಿ ಸಂಭವಿಸಿದ್ದು, 4.4 ತೀವ್ರತೆ ದಾಖಲಾಗಿದೆ. ನಂತರ ಎರಡನೇ ಭಾರಿ ಎಂದರೆ ಗುರುವಾರ ಮುಂಜಾನೆ 2:52ಕ್ಕೆ 10 ಕಿಮೀ ಆಳದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ.
ಇಂದು ಮುಂಜಾನೆ 5:43ಕ್ಕೆ 48 ಕಿಮೀ ಆಳದಲ್ಲಿ 4.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು NCS ಟ್ವೀಟ್ ಮಾಡಿದೆ.
ಈವರೆಗೆ ಭೂಕಂಪದಿಂದಾಗಿ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.