ಹೊಸದಿಗಂತ ವರದಿ,ಶಿವಮೊಗ್ಗ;
ಹರಿಯಾಣದಲ್ಲಿ ಮೂರನೇ ಬಾರಿಗೆ ಜನ ಬಿಜೆಪಿ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ದೇಶದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅತ್ಯಂತ ಸಂತೋಷದ ಕ್ಷಣ, ದೇಶದಲ್ಲಿ ಬಿಜೆಪಿ ಸಂಘಟನೆ ಮತ್ತು ಶಕ್ತಿ ಏನಾಗಿದೆ ಎಂದು ಇಡೀ ಜಗತ್ತು ನೋಡುತ್ತಿದೆ. ಹರಿಯಾಣ ಮತ್ತು ಜಮ್ಮು ಕಾಶ್ಮೀರದಲ್ಲಿ ಗೆದ್ದೆ ಬಿಟ್ಟಿದ್ದೇವೆ ಎಂದು ಕಾಂಗ್ರೆಸ್ ಬೀಗುತ್ತಿತ್ತು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಭಾರಿ ಭಾರಿ ಸಭೆ ನಡೆಸಿ ಟೀಕೆ ಮಾಡಿದ್ರು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಹರಿಯಾಣದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವು ಕಂಡ ಕಾರಣಕ್ಕೆ ಮಂಗಳವಾರ ತೀರ್ಥಹಳ್ಳಿಯಲ್ಲಿ ವಿಜಯೋತ್ಸವ ನಡೆಸಿ ಮಾತನಾಡಿ, ಇಂದಿನ ಫಲಿತಾಂಶ ನೋಡಿ ಕಾಂಗ್ರೆಸ್ ನಾಯಕರೆಲ್ಲರೂ ಮೂಲೆಗೆ ಹೋಗಿ ಕುಳಿತಿದ್ದಾರೆ. ಅವರ ಮುಖಂಡತ್ವಕ್ಕೆ ದೇಶದಲ್ಲಿ ಸ್ಥಾನ ಇಲ್ಲ ಎಂದು ತೋರಿಸಿದ್ದಾರೆ. ಸಮೀಕ್ಷೆ ನೋಡಿ ಕಾಂಗ್ರೆಸ್ ನಾಯಕರು ಬೀಗುತ್ತಿದ್ದರು. ಟನ್ ಗಟ್ಟಲೆ ಜಿಲೇಬಿ ತಂದು ಸಂಭ್ರಮಾಚಾರಣೆ ಮಾಡಲಾಗಿತ್ತು. ಈಗ ಕಾಂಗ್ರೆಸ್ ಕಚೇರಿಯಲ್ಲಿ ಯಾರು ಇಲ್ಲ ಎಂದು ಕಿಚಾಯಿಸಿದರು.
ಎರಡು ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಹಣೆಬರಹಕ್ಕೆ ಗೆಲುವಿನ ಹತ್ತಿರ ಕೂಡ ಬರಲು ಸಾಧ್ಯವಾಗಿಲ್ಲ.ಜಾತಿ ಹೇಳಿದ್ರಿ, ಅಲ್ಪಸಂಖ್ಯಾತರನ್ನು ದೇಶದಲ್ಲಿ ಎತ್ತು ಕಟ್ಟುತ್ತೀರಿ. ಆದರೆ ಯಾವುದು ಸಹ ವರ್ಕೌಟ್ ಆಗಿಲ್ಲ, ಅದೇ ಅಲ್ಪಸಂಖ್ಯಾತ ಬಂಧುಗಳು ಜಮ್ಮು ಕಾಶ್ಮೀರದಲ್ಲಿ ನಿಮಗೆ ತಕ್ಕ ಪಾಠ ಕಲಿಸಿದ್ದಾರೆ. ಆರರಿಂದ ಏಳು ಸೀಟುಗಳಿಗೆ ತಂದು ಕೂರಿಸಿದ್ದಾರೆ, ಜನ ಇವತ್ತು ದೇಶಕ್ಕೆ ಬಿಜೆಪಿ ಬೇಕು ಎಂದು ತೋರಿಸಿದ್ದಾರೆ ಎಂದರು .