ಒಂದೇ ತರಗತಿಯ 30-40 ಮಕ್ಕಳ ಕೈಯಲ್ಲಿ ಚಾಕುವಿನ ಕಟ್‌! ಮತ್ತೆ ಬಂತಾ ಡೆಡ್ಲಿ ಬ್ಲ್ಯೂವೇಲ್‌ ಗೇಮ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗುಜರಾತ್​ನ ಅಮ್ರೇಲಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಈ ಶಾಲೆಯಲ್ಲಿ ಓದುತ್ತಿರುವ 30 ರಿಂದ 40 ವಿದ್ಯಾರ್ಥಿಗಳ ಕೈಗಳ ಮೇಲೆ ಕತ್ತರಿಸಿದ ಗುರುತುಗಳು ಕಾಣಿಸಿಕೊಂಡಿರುವುದು ಎಲ್ಲರಲ್ಲೂ ಗೊಂದಲ ಉಂಟುಮಾಡಿದೆ. ಈ ಬಗ್ಗೆ ರಾಜ್ಯ ಶಿಕ್ಷಣ ಇಲಾಖೆ ತನಿಖೆ ನಡೆಸುತ್ತಿದೆ.

ಅಮ್ರೇಲಿಯ ಬಾಗ್ಸಾರಾ ತಾಲ್ಲೂಕಿನ ಮೋಟಾ ಮುಂಜಿಯಾಸರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮುಖ್ಯಸ್ಥ ಜಯಸುಖ್​ಭಾಯ್​ ಅವರು ಶಿಕ್ಷಣ ಇಲಾಖೆ ಹಾಗೂ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿ, ತನಿಖೆ ನಡೆಸುವಂತೆ ಒತ್ತಾಯಿಸಿದರು. ಶಿಕ್ಷಣ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದೆ.

ಬ್ಲೇಡ್‌ನಂತಹ ವಸ್ತುವಿನಿಂದ ಗಾಯಗಳಾಗಿರುವಂತೆ ಈ ಗುರುತುಗಳು ಕಂಡುಬಂದಿವೆ. ವಿದ್ಯಾರ್ಥಿಗಳು ಬ್ಲೂ ವೇಲ್ ಚಾಲೆಂಜ್ ಆಟದಂತಹ ಯಾವುದೋ ಮಾರಕ ಆನ್‌ಲೈನ್ ಆಟದಲ್ಲಿ ಭಾಗಿಯಾಗಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!