ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ತಿರುವನಂತಪುರಂ ನಗರಪಾಲಿಕೆ ಎನ್ ಡಿಎ ಪಾಲಾಗಿದೆ.
ಕಾರ್ಪೊರೇಷನ್, ಪುರಸಭೆ, ಬ್ಲಾಕ್ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಯುಡಿಎಫ್ ಪ್ರಾಬಲ್ಯ ಸಾಧಿಸಿದಿದ್ರೆ, ಜಿಲ್ಲಾ ಪಂಚಾಯಿತಿಯಲ್ಲಿ ಯುಡಿಎಫ್, ಎಲ್‌ಡಿಎಫ್ ಸಮಬಲ ಸಾಧಿಸಿವೆ.
ರಾಜಧಾನಿಯಲ್ಲಿ ಬಿಜೆಪಿ ಕಮಾಲ್
ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ಎನ್‌ಡಿಎ ಕಮಾಲ್ ಮಾಡಿದೆ. ಸಿಪಿಎಂ ಬಿಗಿಮುಷ್ಠಿಯಲ್ಲಿದ್ದ ತಿರುವನಂತಪುರ ಕಾರ್ಪೋರೇಷನ್ ಹಾಗೂ ತ್ರಿಪುನಿತುರಾ ಮುನಿಸಿಪಾಲಿಟಿಯನ್ನು ಅನ್ನು ಬಿಜೆಪಿ ತನ್ನ ವಶ ಮಾಡಿಕೊಂಡಿದೆ. ಈ ಮೂಲಕ ಐತಿಹಾಸಿಕ ಸಾಧಾನೆ ಮಾಡಿದೆ.
59 ಜಿಲ್ಲಾ ಪಂಚಾಯತ್‌ಗಳು, 1,063 ಬ್ಲಾಕ್ ಪಂಚಾಯತ್‌ಗಳು ಮತ್ತು 7,451 ಗ್ರಾಮ ಪಂಚಾಯತ್‌ಗಳಲ್ಲಿ ಯುಡಿಎಫ್ ಗೆದ್ದಿದೆ. ಇನ್ನೂ LDF 30 ಜಿಲ್ಲಾ ಪಂಚಾಯಿತಿಗಳು, 823 ಬ್ಲಾಕ್ ಪಂಚಾಯಿತಿಗಳು ಮತ್ತು 6,137 ಗ್ರಾಮ ಪಂಚಾಯಿತಿಗಳನ್ನು ಗೆದ್ದುಕೊಂಡಿದೆ. ಎನ್‌ಡಿಎ ಕೇವಲ ಒಂದು ಜಿಲ್ಲಾ ಪಂಚಾಯಿತಿ, 50 ಬ್ಲಾಕ್ ಪಂಚಾಯಿತಿಗಳು ಮತ್ತು 1,363 ಗ್ರಾಮ ಪಂಚಾಯಿತಿಗಳನ್ನು ಗೆದ್ದುಕೊಂಡಿದೆ.
ಎನ್ ಡಿಎ 50 ಸ್ಥಾನಗಳು ಭದ್ರ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಲಾಭವೇನೆಂದರೆ, 101 ಸದಸ್ಯರ ತಿರುವನಂತಪುರ ನಗರ ಪಾಲಿಕೆಯಲ್ಲಿ ಎನ್‌ಡಿಎ 50 ಸ್ಥಾನಗಳನ್ನು ಪಡೆದುಕೊಂಡಿದೆ.

