ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ರಾಜಧಾನಿ ತಿರುವನಂತಪುರದ ಎರಡು ರೈಲು ನಿಲ್ದಾಣಗಳ ಹೆಸರು ಶೀಘ್ರವೇ ಬದಲಾಗಲಿದೆ.
ಇಲ್ಲಿನ ನೇಮಮ್ ರೈಲು ನಿಲ್ದಾಣ ತಿರುವನಂತಪುರಂ ದಕ್ಷಿಣವಾಗಿ ಹಾಗೂ ಕೊಚುವೇಲಿ ನಿಲ್ದಾಣ ತಿರುವನಂತಪುರಂ ಉತ್ತರ ಎಂದು ಶೀಘ್ರವೇ ತಮ್ಮ ಹೆಸರು ಬದಲಾಯಿಸಿಕೊಳ್ಳಲಿವೆ.
ತಿರುವನಂತಪುರಂ ಕೇಂದ್ರಿತ ರೈಲ್ವೆ ಅಭಿವೃದ್ಧಿಯ ಅನುಷ್ಠಾನದ ಭಾಗವಾಗಿ ಈ ಮರುನಾಮಕರಣ ನಡೆಯಲಿದೆ. ತಿರುವನಂತಪುರ ರೈಲ್ವೆ ವಿಭಾಗದ ವ್ಯವಸ್ಥಾಪಕರು ಇದೇ ತಿಂಗಳ 1ರಂದು ರಾಜ್ಯಕ್ಕೆ ಪತ್ರ ನೀಡಿದ್ದರು. ರೈಲು ನಿಲ್ದಾಣಗಳ ಹೆಸರು ಬದಲಾವಣೆಗೆ ಯಾವುದೇ ಅಭ್ಯಂತರವಿಲ್ಲ ಎಂದು ರಾಜ್ಯ ಸರ್ಕಾರ ಇಲಾಖೆಗೆ ಹೇಳಿದೆ. ಇನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಸಾರಿಗೆ ಇಲಾಖೆಯ ಕಾರ್ಯದರ್ಶಿ ಶನಿವಾರ ಪತ್ರ ರವಾನಿಸಿದ್ದು, ರಾಜ್ಯವು ಈ ಬೇಡಿಕೆಯನ್ನು ಒಪ್ಪಿಕೊಳ್ಳುತ್ತದೆ ಎಂದು ಸೂಚಿಸಿದ್ದಾರೆ.
ನೇಮಮ್ ಹಾಗೂ ಕೊಚುವೇಲಿ ನಿಲ್ದಾಣಗಳನ್ನು ತಿರುವನಂತಪುರಂ ಕೇಂದ್ರ ನಿಲ್ದಾಣದ ಉಪ ಟರ್ಮಿನಲ್‌ಗಳಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ತಿರುವನಂತಪುರಂ ಸೆಂಟ್ರಲ್‌ನಲ್ಲಿ ಗರಿಷ್ಠ ಸಂಖ್ಯೆಯ ರೈಲುಗಳು ಕಾರ್ಯನಿರ್ವಹಿಸುವುದರಿಂದ ಈ ಉಪ ಟರ್ಮಿನಲ್‌ಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.