ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರಿಯನ್ ಸಂಸ್ಕೃತಿ, ಆಹಾರ, ಫ್ಯಾಷನ್ ಈಗಾಗಲೇ ಭಾರತ ತಲುಪಿದೆ. ಅಂತೆಯೇ ಭಾರತದ ಸಿನಿಮಾಗಳು, ಭಾರತದ ಆಹಾರ ಹಾಗೂ ಫ್ಯಾಷನ್‌ನ್ನು ಕೊರಿಯಾದ ಜನರು ಕೂಡ ಇಷ್ಟಪಡುತ್ತಿದ್ದಾರೆ. ಈ ಬೆನ್ನಲ್ಲೇ ನನಗೆ ಕನ್ನಡ ಸಿನಿಮಾ ಮಾಡೋಕೆ ಇಷ್ಟ ಎಂದು ನಟ ವಿ ಹಾ ಜೂನ್ (Wi ha joon) ಹೇಳಿಕೊಂಡಿದ್ದಾರೆ.
ನಾನು ಭಾರತೀಯ ಸಿನಿಮಾಗಳನ್ನು ನೋಡಿದ್ದೇನೆ. 3 ಇಡಿಯಟ್ಸ್, ಕಿಲ್ ಹಾಗೂ ಕೆಜಿಎಫ್ ನನ್ನ ನೆಚ್ಚಿನ ಸಿನಿಮಾ ಎಂದು ಹಾ ಜೂನ್ ಹೇಳಿಕೊಂಡಿದ್ದಾರೆ.
ಸ್ಕ್ವಿಡ್‌ಗೇಮ್ಸ್‌ನ ಎಲ್ಲ ಪಾರ್ಟ್‌ನಲ್ಲಿಯೂ ಜೂನ್ ಕಾಣಿಸಿಕೊಂಡಿದ್ದಾರೆ. ಡಿಕೆಟ್ವೀವ್ ಪಾತ್ರ ಮಾಡಿರುವ ಜೂನ್ ಮೂರು ಸೀಸನ್‌ಗಳಲ್ಲಿಯೂ ಗೇಮ್ಸ್ ನಡೆಯುವ ಐಲ್ಯಾಂಡ್‌ನ್ನು ಹುಡುಕುತ್ತಾರೆ.