ವಿಶ್ವದ 10 ಸುಂದರ ಮಹಿಳೆಯರಲ್ಲಿ ಏಕೈಕ ಭಾರತೀಯರಾಗಿ ಸ್ಥಾನ ಪಡೆದಿದ್ದಾರೆ ಈ ನಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗಣಕೀಕೃತ ತಂತ್ರವನ್ನು ಬಳಸಿಕೊಂಡು ‘ಗೋಲ್ಡನ್ ರೇಶಿಯೊ ಆಫ್ ಬ್ಯೂಟಿ’ ಎಂಬ ಪ್ರಾಚೀನ ಗ್ರೀಕ್ ತಂತ್ರವನ್ನು ಅನ್ವಯಿಸಿ ವಿಶ್ವದ ಟಾಪ್‌ 10 ಸುಂದರ ಮಹಿಳೆಯರ ಪಟ್ಟಿಯನ್ನು ವಿಜ್ಞಾನಿಗಳು ಬಿಡುಗಡೆ ಮಾಡಿದ್ದು ಇದರಲ್ಲಿ ಭಾರತೀಯ ನಟಿಯೊಬ್ಬರೂ ಕೂಡ ಸ್ಥಾನಗಳಿಸಿದ್ದಾರೆ.

ಫೀಎಂದು ಕರೆಯಲ್ಪಡುವ ಗಣಿತ ವಿಧಾನದ ಮೂಲಕ ಒಬ್ಬರ ಮುಖ ಮತ್ತು ದೇಹದ ನಿರ್ದಿಷ್ಟ ಅನುಪಾತಗಳಿಂದ ಅಳೆಯುವ ಮೂಲಕ ಗಣಕೀಕೃತ ತಂತ್ರಜ್ಞಾನದಲ್ಲಿ ಅವರ ಸೌಂದರ್ಯವನ್ನು ಅಳೆಯಲಾಗಿದೆ. ಇದರಲ್ಲಿ ವಿದೇಶಿ ತಾರೆ ಜುಡಿ ಕಮರ್‌ ಅವರನ್ನು ವಿಶ್ವದ ಅತ್ಯಂತ ಸುಂದರ ಮಹಿಳೆ ಎಂದು ಘೋಷಿಸಲಾಗಿದೆ. ಗುರುತಿಸಲ್ಪಟ್ಟಿರುವ ವಿಶ್ವದ ಅತ್ಯಂತ ಸುಂದರ ಮಹಿಳೆಯರ ಟಾಪ್‌ 10 ಪಟ್ಟಿಯಲ್ಲಿ ಭಾರತದ ನಟಿ ದೀಪಿಕಾ ಪಡುಕೋಣೆ ಒಂಭತ್ತನೇ ಸ್ಥಾನಗಳಿಸಿದ್ದಾರೆ. ಅಲ್ಲದೇ ಇತರ ವಿದೇಶಿ ನಟಿಯರಾದ ಬೆಯೋನ್ಸ್ ಮತ್ತು ಕಿಮ್ ಕಾರ್ಡಶಿಯಾನ್ ಕೂಡ ಟಾಪ್ 10 ರಲ್ಲಿ ಸ್ಥಾನ ಪಡೆದಿದ್ದಾರೆ.

ಜುಡಿ ಕಮರ್ ಹೊರತಾಗಿ, ಪಟ್ಟಿಯಲ್ಲಿರುವ ಇತರ ಖ್ಯಾತನಾಮರ ಗೋಲ್ಡನ್ ರೇಶಿಯೋ ಸ್ಕೋರ್‌ಗಳು ಹೀಗಿವೆ – ಝೆಂಡಯಾ (94.37 ಶೇಕಡಾ), ಬೆಲ್ಲಾ ಹಡಿದ್ (94.35 ಶೇಕಡಾ), ಬೆಯೋನ್ಸ್ (92.44 ಶೇಕಡಾ), ಅರಿಯಾನಾ ಗ್ರಾಂಡೆ (91.81 ಶೇಕಡಾ), ಟೇಲರ್ ಸ್ವಿಫ್ಟ್ (91.64 ಶೇಕಡಾ), ಜೋರ್ಡಾನ್ ಡನ್ (ಶೇ. 91.39), ಕಿಮ್ ಕಾರ್ಡಶಿಯಾನ್ (ಶೇ. 91.28), ದೀಪಿಕಾ ಪಡುಕೋಣೆ (ಶೇ. 91.22) ಮತ್ತು ಹೋಯೆನ್ ಜಂಗ್ (ಶೇ. 89.63).

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!