ಹೊಸದಿಗಂತ ಡಿಜಿಟಲ್ ಡೆಸ್ಕ್:
ಗದಾರ್ 2 ಅಂದುಕೊಂಡಕ್ಕಿಂತ ದೊಡ್ಡ ಮಟ್ಟಿಗಿನ ಯಶಸ್ಸು ಕಂಡಿದ್ದು, ಈಗಾಗಲೇ 500 ಕೋಟಿವರೆಗೂ ಕಮಾಯಿ ಮಾಡಿದೆ.
22 ವರ್ಷದ ಹಿಂದಿನ ಸಿನಿಮಾ ಗದಾರ್‌ನ ಸೀಕ್ವೆಲ್ ಇದಾಗಿದ್ದು, ಅಷ್ಟು ವರ್ಷದ ನಂತರವೂ ಪಾರ್ಟ್-2 ಸಿನಿಮಾವನ್ನು ಜನ ಇಷ್ಟಪಟ್ಟಿದ್ದಾರೆ.
ಇತ್ತ ಗದಾರ್-2 ಜತೆಗೆ ರಿಲೀಸ್ ಆದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾಗೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಜತೆಗೆ ಆಲಿಯಾ ಭಟ್‌ಗೆ ಗಂಗೂಬಾಯಿ ಸಿನಿಮಾಗಾಗಿ ನ್ಯಾಷನಲ್ ಅವಾರ್ಡ್ ಕೂಡ ದೊರಕಿದೆ.
ಆಲಿಯಾ ಭಟ್‌ರನ್ನು ಕಂಡರೆ ನನಗೆ ತುಂಬಾ ಇಷ್ಟ, ಅವರ ಜೊತೆ ಒಂದು ಸಿನಿಮಾ ಮಾಡುವ ಆಸೆ ಇದೆ. ಹೀರೊಯಿನ್ ಆಗಬೇಕು ಅಂತಿಲ್ಲ. ಅಪ್ಪ ಮಗಳ ಸ್ಟೋರಿ ಆದರೂ ಖುಷಿಯೇ ಎಂದಿದ್ದಾರೆ.