ವಿಷಕಾರಿ ಜೀವಿಗಳ ಬಗ್ಗೆ ಮಾತನಾಡಿದಾಗ ಹೆಚ್ಚಿನವರು ಹಾವು ಅಥವಾ ಚೇಳನ್ನು ತಕ್ಷಣ ನೆನೆಸಿಕೊಳ್ಳುತ್ತಾರೆ. ಆದರೆ, ಕೆಲವೊಂದು ಇರುವೆಗಳು ಕೂಡ ಪ್ರಾಣಾಪಾಯಕ್ಕೆ ಕಾರಣವಾಗಬಹುದೆಂಬ ಸಂಗತಿ ಬಹುತೇಕ ಜನರಿಗೆ ಗೊತ್ತಿಲ್ಲ. ವಿಜ್ಞಾನಿಗಳು ಹೇಳುವಂತೆ, ಈ ಇರುವೆಗಳ ವಿಷವು ನೇರವಾಗಿ ನರಮಂಡಲ ಮತ್ತು ಸ್ನಾಯುಗಳಿಗೆ ಪರಿಣಾಮ ಬೀರುತ್ತದೆ. ಕೆಲವೊಂದು ಕಚ್ಚಿದರೆ ತೀವ್ರ ನೋವು, ಉರಿ, ಶ್ವಾಸಕೋಶದ ಸಮಸ್ಯೆ, ಅನಾಫಿಲ್ಯಾಕ್ಸಿಸ್ ಮತ್ತು ಅಪಾಯಕರ ಆಘಾತಕ್ಕೂ ಕಾರಣವಾಗಬಹುದು.
ಬುಲೆಟ್ ಇರುವೆ (Bullet Ant): ಪ್ಯಾರಪೋನೆರಾ ಕ್ಲಾವಾಟಾ ಎಂದು ಕರೆಯಲ್ಪಡುವ ಈ ಇರುವೆ ದಕ್ಷಿಣ ಅಮೆರಿಕದ ಕಾಡುಗಳಲ್ಲಿ ಕಂಡುಬರುತ್ತದೆ. ಇದು “24 hours poison” ಎಂದೇ ಪ್ರಸಿದ್ಧ. ಇದರ ಕುಟುಕು ನರಮಂಡಲಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಬುಲ್ಡಾಗ್ ಇರುವೆ (Bulldog Ant): ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಈ ಇರುವೆ ತನ್ನ ದವಡೆಗಳಿಂದ ಕಚ್ಚಿ ನಂತರ ಕುಟುಕುವ ವಿಶಿಷ್ಟತೆ ಹೊಂದಿದೆ. ಇದರ ವಿಷವು ಅನಾಫಿಲ್ಯಾಕ್ಟಿಕ್ ಆಘಾತಕ್ಕೆ ಕಾರಣವಾಗಬಹುದು ಮತ್ತು ಕೆಲವೊಮ್ಮೆ ಇದು ಸಾವಿಗೆ ಅಪಾಯಕ್ಕೂ ತೆಗೆದುಕೊಂಡು ಹೋಗಬಹುದು.
ಬೆಂಕಿ ಇರುವೆ (Fire Ant): ಈ ಸಣ್ಣ ಇರುವೆ ಗುಂಪುಗಳಲ್ಲಿ ದಾಳಿ ಮಾಡುತ್ತದೆ. ಪೈಪೆರಿಡಿನ್ ಆಧಾರಿತ ವಿಷವು ಚರ್ಮದ ಮೇಲೆ ಉರಿ, ರ‍್ಯಾಶ್ ಮತ್ತು ಭೀಕರ ಕಿರಿಕಿರಿಯನ್ನುಂಟುಮಾಡುತ್ತದೆ.
ಸೇನಾ ಇರುವೆ (Army Ant): ಸಾಮಾನ್ಯವಾಗಿ ಏಷ್ಯಾ ಹಾಗೂ ಅಮೆರಿಕಾದ ಕಾಡುಗಳಲ್ಲಿ ಕಂಡುಬರುವ ಈ ಇರುವೆಗಳು ಗುಂಪು ದಾಳಿಗೆ ಪ್ರಸಿದ್ಧ. ವಿಷ ಹೆಚ್ಚು ತೀವ್ರವಿಲ್ಲದಿದ್ದರೂ ಸಂಖ್ಯಾಬಲದಿಂದ ಭೀತಿಯುಂಟುಮಾಡುತ್ತವೆ.
ಮಾರಿಕೋಪಾ ಹಾರ್ವೆಸ್ಟರ್ ಇರುವೆ: ಅಮೆರಿಕದ ಕೆಲವು ಭಾಗಗಳಲ್ಲಿ ಕಂಡುಬರುವ ಈ ಇರುವೆಯ ಕುಟುಕು ‘ಪೈಪೆರಿಡಿನಲ್ ಕ್ಯಾಲಿಸಸ್’ ಮತ್ತು ಪ್ರೋಟೀನ್‌ಗಳ ಸಂಕೀರ್ಣ ಮಿಶ್ರಣದಿಂದ ಮಾಡಲ್ಪಟ್ಟಿದೆ. ಇದು ತೀವ್ರವಾದ ಉರಿ, ಸ್ನಾಯು ಸೆಳೆತ ಮತ್ತು ಪ್ಯಾನಿಕ್ ಅಟ್ಯಾಕ್‌ಗಳಿಗೆ ಕಾರಣವಾಗುತ್ತದೆ.
ಕಾಡು ಪ್ರದೇಶಗಳಲ್ಲಿ ಅಥವಾ ತೆರೆದ ಸ್ಥಳಗಳಲ್ಲಿ ಇಂತಹ ಅಪಾಯಕಾರಿ ಇರುವೆಗಳಿಂದ ದೂರವಿರುವುದು ಅತ್ಯಗತ್ಯ. ಕಚ್ಚಿದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.