ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ತಲೆ ತಿರುಗುವಷ್ಟು ಬಿಸಲು ಇದೆ, ಮಧ್ಯಾಹ್ನ ಸಮಯದಲ್ಲಿ ಮನೆಯಿಂದ ಹೊರಬರೋದಕ್ಕೆ ಯಾರಿಗೂ ಇಷ್ಟ ಇರೋದಿಲ್ಲ. ಆದರೆ ಅನವಾರ್ಯ ಕಾರಣಗಳಿಂದ ಟ್ರಾವೆಲ್ ಮಾಡಲೇಬೇಕಾದ ಪರಿಸ್ಥಿತಿ ಬರುತ್ತದೆ.
ಈ ರೀತಿ ಮಧ್ಯಾಹ್ನ ಬಿಸಿಲಿನಲ್ಲಿ ಟ್ರಾವೆಲ್ ಮಾಡೋರಿಗೆ ಈ ಬಿಎಂಟಿಸಿ ಬಸ್ ಹೇಳಿ ಮಾಡಿಸಿದಂತಿದೆ. ಯಾಕೆ ಗೊತ್ತಾ?
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಬಿಎಂಟಿಸಿ ಡಿಪೋದಿಂದ ಸೂಲಿಬೆಲೆ ಮೂಲಕ ಹೊಸಕೋಟೆಗೆ ತೆರಳುವ ಬಿಎಂಟಿಸಿ ಬಸ್‌ನಲ್ಲಿ ವಿಶಿಷ್ಟ ಸೌಲಭ್ಯಗಳಿವೆ.
ಈ ಬಸ್ ಚಾಲಕ ಲೋಕೇಶ್ ಎನ್ನುವವರು ಪುಟ್ಟ ಪುಟ್ಟ ಪಾಟ್‌ಗಳನ್ನು ಇಟ್ಟು ಡ್ರೈವಲ್ ಸುತ್ತಮುತ್ತಲ ಜಾಗವನ್ನು ನೋಡೋದಕ್ಕೆ ಸುಂದರವಾಗಿಸಿಕೊಂಡಿದ್ದಾರೆ. ಗಿಡಗಳು, ಬಳ್ಳಿಗಳನ್ನು ನೋಡಿ ಪ್ರಯಾಣಿಕರು ಖುಷಿಯಾಗಿದ್ದಾರೆ.
ಇದರ ಜೊತೆಗೆ ಬಸ್‌ನಲ್ಲಿ 40 ಲೀಟರ್‌ನ ಕುಡಿಯುವ ನೀರಿನ ಕ್ಯಾನ್ ಇಟ್ಟುಕೊಳ್ಳಲಾಗಿದೆ. ಬಾಯಾರಿದ ಪ್ರಯಾಣಿಕರಿಗೆ ನೀರನ್ನು ನೀಡುತ್ತಾರೆ. ಒಟ್ಟಾರೆ ಬಸ್ ಎಂದರೆ ಹೀಗೆ ಇರಬೇಕು ಎನ್ನುವಂತಿದೆ ನಮ್ಮ ಬಿಎಂಟಿಸಿ!