March 16, 2026
Monday, March 16, 2026
spot_img

ಮೆಟ್ರೋ ನಲ್ಲೂ ಸುಮ್ನೆ ಕೂರೋಕೆ ಬಿಡಲ್ಲ ಈ ಬಾಸ್: ಕೆಲಸದ ಟೆನ್ಶನ್, ಲ್ಯಾಪ್‌ಟಾಪ್ ತೆರೆದು ನೆಲದ ಮೇಲೆ ಕೂತ ಯುವಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲಸದ ಒತ್ತಡಕ್ಕೆ ಒಳಗಾದ ಉದ್ಯೋಗಿಗಳು ಎಲ್ಲೆಲ್ಲಿ ಕುಳಿತು ಕೆಲಸ ಮಾಡುವರು ಎಂಬುದಕ್ಕೆ ಉದಾಹರಣೆಯಂತೆ ದೆಹಲಿ ಮೆಟ್ರೋದಲ್ಲಿ ಒಂದು ಘಟನೆ ನಡೆದಿದೆ. ಜನದಟ್ಟಣೆಯಿಂದ ತುಂಬಿದ ಬೋಗಿಯೊಳಗೆ ಯುವಕನೊಬ್ಬ ಲ್ಯಾಪ್‌ಟಾಪ್ ತೆರೆದು ನೆಲದ ಮೇಲೆ ಕುಳಿತು ತನ್ನ ಕೆಲಸವನ್ನು ನಿರ್ವಹಿಸಿದ್ದಾನೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವೀಕ್ಷಕರನ್ನು ಶಾಕ್ ಮಾಡಿದೆ.

@kuxh101 ಎಂಬ ಖಾತೆಯಿಂದ ಹಂಚಿರುವ ಪೋಸ್ಟ್‌ನಲ್ಲಿ ಯುವಕನು ಕಿಕ್ಕಿರಿದ ಬೋಗಿಯ ಒಂದು ಮೂಲೆಯಲ್ಲಿ ಕೆಲಸದಲ್ಲಿ ತೊಡಗಿರುವುದು ಕಾಣಬಹುದು. ಲ್ಯಾಪ್‌ಟಾಪ್ ತೊಡೆಯ ಮೇಲೆ ಇಟ್ಟಿದ್ದಾನೆ ಮತ್ತು ಮತ್ತೊಂದು ಕೈಯಲ್ಲಿ ಫೋನ್ ಹಿಡಿದುಕೊಂಡು, ಆಫೀಸ್ ಕಾಲ್ ಸ್ವೀಕರಿಸಿದ್ದಾನೆ.

ಇದನ್ನೂ ಓದಿ:

ಬಳಕೆದಾರರು ಪೋಸ್ಟ್‌ನಲ್ಲಿ “ಮ್ಯಾನೇಜರ್‌ನಿಂದ ಕರೆ ಬಂತು, ತಕ್ಷಣ ಲ್ಯಾಪ್‌ಟಾಪ್ ತೆರೆದು ನೆಲದ ಮೇಲೆ ಕುಳಿತು ಕೆಲಸ ಪ್ರಾರಂಭಿಸಿದ” ಎಂದು ಬರೆದಿದೆ. ಈ ಪೋಸ್ಟ್ 2 ಮಿಲಿಯನ್‌ಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದ್ದು, ನೆಟಿಜನ್‌ಗಳು ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು “ಇದೇ ಕಾರಣಕ್ಕೆ ಓದುವುದನ್ನೇ ಬಿಟ್ಟೆ” ಎಂದು ಕಾಮೆಂಟ್ ಮಾಡಿದ್ದಾರೆ, ಮತ್ತೊಬ್ಬರು “ಭಾನುವಾರವೂ ಕೆಲಸಾ?” ಎಂದು ಕಮೆಂಟ್ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !