ಈ ಎತ್ತು ನೋಡಲು ಭಯಾನಕ..ಆದರೆ, ಶಾಂತ ಸ್ವಭಾವ!

ಹೊಸದಿಗಂತ ವರದಿ ಹಳಿಯಾಳ:

ಮಣ್ಣೆತ್ತಿನ ಅಮಾವಾಸ್ಯೆ ಸಂದರ್ಭದಲ್ಲಿ ಹಳಿಯಾಳಿಗರಿಗಾಗಿ ದೇಶೀಯ ವಿಶಿಷ್ಟ ಕಾಂಕ್ರೇಜ್ ತಳಿಯ ಎತ್ತಿನ ದರ್ಶನ ಗಲ್ಲಿಯ ಮನೆಗಳ ಮುಂದೆ ನಡೆಯಿತು.

ಕಾಂಕ್ರೇಜ್ ತಳಿಯ ಜಾನುವಾರಗಳು ಕಾಣ ಸಿಗುವುದು ಗುಜರಾತ್ ಮತ್ತು ರಾಜಸ್ಥಾನದ ಬಯಲುಸೀಮೆ ಮತ್ತು ಕಛನ ಶುಷ್ಕ ಮತ್ತು ಬಿಸಿಲಿನ ಪ್ರದೇಶಗಳಲ್ಲಿ, ದಪ್ಪ ಗಾತ್ರದ ಗಿಡ್ಡದಾದ ಬಲಿಷ್ಠವಾದ ಕೊಂಬುಗಳನ್ನು ಹೊಂದಿದ್ದು, ನೋಡಲು ಭಯಾನಕವಾಗಿ ಕಂಡರೂ ತುಂಬಾ ಶಾಂತವಾದ ಮತ್ತು ಮಾನವರೊಂದಿಗೆ ಬಹಳ ಹೊಂದಿಕೊಂಡು ಬದುಕುವಂತಹವು.

ಇದನ್ನು ಸಾಮಾನ್ಯವಾಗಿ ಹೊಲದ ಕಠಿಣ ಕೆಲಸಕ್ಕಾಗಿ ಮತ್ತು ಹಾಲಿಗಾಗಿ ಸಾಕಲಾಗುತ್ತದೆ. ಇದರ ಹಾಲಿನ ತುಪ್ಪ ಮತ್ತು ಪನೀರ್ ತುಂಬ ರುಚಿಕರ ಮತ್ತು ಪ್ರಸಿದ್ಧವಾಗಿದೆ. ಆದರೆ ಇತ್ತೀಚೆಗೆ ಈ ತಳಿಯ ದನಗಳು ಮಾಂಸಕ್ಕಾಗಿ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿವೆ.

ಇವು ಇರುವಲ್ಲಿ ದನಗಳಿಗೆ ತಗಲುವ ಸಾಂಕ್ರಾಮಿಕ ರೋಗಗಳು ತಗಲುವುದಿಲ್ಲ ಎನ್ನುವುದು ಕೂಡ ಸಾಬೀತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!