ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಲ್ಲಿ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ನಟಿ ಕಂಗನಾ , ಕರಣ್ ಜೋಹರ್ (Karan Johar) ಬಗ್ಗೆ ಯಾರಾದರೂ ಮಾತನಾಡಿದ ಕೂಡಲೇ ಧ್ವನಿಗೂಡಿಸುತ್ತಾರೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಾರೆ.
ಇತ್ತೀಚೆಗೆ ಕರಣ್ ಜೋಹರ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ‘ಅನುಷ್ಕಾ ಶರ್ಮಾ ಅವರ ಕರಿಯರ್ನ ನಾಶ ಮಾಡಬೇಕು ಎಂದುಕೊಂಡಿದ್ದೆ’ ಎಂಬುದಾಗಿ ಕರಣ್ ಒಪ್ಪಿಕೊಂಡಿದ್ದರು. ಈ ವಿಡಿಯೋಗೆ ಕಂಗನಾ ಉತ್ತರ ನೀಡಿದ್ದಾರೆ.
2008ರಲ್ಲಿ ಬಂದ ಶಾರುಖ್ ಖಾನ್ ನಟನೆಯ ‘ರಬ್ ನೇ ಬನಾದಿ ಜೋಡಿ’ ಸಿನಿಮಾದಲ್ಲಿ ಅನುಷ್ಕಾ ನಟಿಸಿದ್ದರು. ಇದು ಅವರ ಮೊದಲ ಸಿನಿಮಾ. ಯಶ್ ಚೋಪ್ರಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಸಿನಿಮಾ ಸೆಟ್ಟೇರುವುದಕ್ಕೂ ಮುನ್ನ ಅನುಷ್ಕಾ ಅವರ ಫೋಟೋನ ಚಿತ್ರದ ನಿರ್ದೇಶಕ ಆದಿತ್ಯ ಚೋಪ್ರಾ ಅವರು ಕರಣ್ ಜೋಹರ್ಗೆ ತೋರಿಸಿದ್ದರಂತೆ. ಕರಣ್ಗೆ ಅನುಷ್ಕಾ ಇಷ್ಟವಾಗಲೇ ಇಲ್ಲವಂತೆ.
ಈ ಕುರಿತು 2016ರಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಕರಣ್ ಅನುಷ್ಕಾ ಮುಂದೆಯೇ ಹೇಳಿಕೊಂಡಿದ್ದರು. ‘ಆದಿತ್ಯ ಚೋಪ್ರಾ ಅವರು ಮೊದಲ ಬಾರಿಗೆ ಫೋಟೋ ತೋರಿಸಿದಾಗ ನಾನು ಅನುಷ್ಕಾ ಅವರ ವೃತ್ತಿಜೀವನವನ್ನು ನಾಶಮಾಡಬೇಕು ಎಂದುಕೊಂಡಿದ್ದೆ. ನನ್ನ ತಲೆಯಲ್ಲಿ ಬೇರೆ ಹೀರೋಯಿನ್ ಹೆಸರು ಇತ್ತು’ ಎಂದು ಹೇಳಿದ್ದರು.
ಈ ವಿಡಿಯೋನ ಈಗ ಮತ್ತೆ ಶೇರ್ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಉತ್ತರಿಸಿರುವ ಕಂಗನಾ ಅವರು, ‘ಈ ಚಾಚಾ ಚೌಧರಿಗೆ ಇದೊಂದೇ ಕೆಲಸ’ ಎಂದಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಕಂಗನಾ ಈ ಪೋಸ್ಟ್ ವಿಚಾರ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಅವರು, ಬಾಲಿವುಡ್ನಿಂದ ನನ್ನ ಹೊರಗಿಡುವ ಪ್ರಯತ್ನ ಆಯಿತು ಎಂದು ಹೇಳಿದ್ದರು. ಈ ರೀತಿ ಮಾಡಿದ್ದು ಕರಣ್ ಜೋಹರ್ ಎನ್ನುವ ಆರೋಪವನ್ನು ಕಂಗನಾ ಮಾಡಿದ್ದರು.