ಹೊಸದಿಗಂತ ಡಿಜಿಟಲ್ ಡೆಸ್ಕ್:
`ವಿಕಸಿತ ಭಾರತ’ ವನ್ನು (Viksit Bharat) ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಈ ಬಾರಿಯ ಲೋಕಸಭಾ ಚುನಾವಣೆ (Lok Sabha Election 202) ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ (Uttar Pradesh) ತಮ್ಮ ಮೊದಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಕೇವಲ ಸರ್ಕಾರ ರಚನೆಗಾಗಿ ಮಾತ್ರ ಚುನಾವಣೆ ನಡೆಯುವುದಿಲ್ಲ. ಜನರು ದೇಶದ ಅಭಿವೃದ್ಧಿಯ ಟ್ರೇಲರ್ ಅನ್ನು ಮಾತ್ರ ನೋಡಿದ್ದಾರೆ. ಮುಂದಿನ 5 ವರ್ಷಕ್ಕೆ ಬೇಕಾದ ಮಾರ್ಗಸೂಚಿಯನ್ನು ನಮ್ಮ ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ತಿಳಿಸಿದ್ದಾರೆ.
ನಾವು ಮುಂದಿನ ಐದು ವರ್ಷಗಳ ಮಾರ್ಗಸೂಚಿಯನ್ನು ತಯಾರಿಸುತ್ತಿದ್ದೇವೆ. ಮೊದಲ 100 ದಿನಗಳಲ್ಲಿ ನಾವು ಯಾವ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಅನ್ನೋ ಬಗೆಗಿನ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಕಳೆದ 10 ವರ್ಷಗಳಲ್ಲಿ, ಜನರು ಅಭಿವೃದ್ಧಿಯ ಟ್ರೇಲರ್ನ್ನು ಮಾತ್ರ ನೋಡಿದ್ದೀರಿ, ಈಗ ನಾವು ದೇಶವನ್ನು ಇನ್ನೂ ಹೆಚ್ಚು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ ಎಂದಿದ್ದಾರೆ.
ನಾನು ಬಡತನದಲ್ಲಿ ಬದುಕಿದ್ದೇನೆ. ತಿಯೊಬ್ಬ ಬಡವರ ದುಃಖ ಮತ್ತು ನೋವು ನನಗೆ ಚೆನ್ನಾಗಿ ಅರ್ಥವಾಗುತ್ತದೆ. ನಾವು ಬಡವರ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಯೋಜನೆಗಳನ್ನು ಕೈಗೊಂಡಿದ್ದೇವೆ. ಬಡವರ ಸಬಲೀಕರಣ ಮಾತ್ರ ಮಾಡಿಲ್ಲ. ಬಡವರ ಆತ್ಮಗೌರವವನ್ನು ಅವರಿಗೆ ಮರಳಿಸಿದ್ದೇವೆ ಎಂದಿದ್ದಾರೆ.