ದೇಹದಲ್ಲಿ ತೂಕ ಇಳಿಕೆಗೆ ಫ್ಯಾಟ್ ಲಾಸ್ ಬಹುಮುಖ್ಯ ಅಂಶ. ತೂಕ ಇಳಿಸಿಕೊಳ್ಳಲು ಇಷ್ಟಪಡುವವರು ಈ ಆಹಾರವನ್ನು ಡಯಟ್‌ನಲ್ಲಿ ಸೇರಿಸಿಕೊಳ್ಳಿ. ಯಾವೆಲ್ಲಾ ಆಹಾರ ನೋಡಿ..
ಓಟ್ಸ್
ಓಟ್ಸ್‌ನಲ್ಲಿ ಹೆಚ್ಚು ಫೈಬರ್ ಇರುವ ಕಾರಣ ಬೇಗ ಹೊಟ್ಟೆ ತುಂಬುತ್ತದೆ. ಹಸಿವೂ ಆಗುವುದಿಲ್ಲ.
ಕಾಳುಮೆಣಸು
ಪೆಪ್ಪರ್‌ನ್ನು ಅಡುಗೆಯಲ್ಲಿ ಸೇರಿಸಿ ಆಗಾಗ ಬಳಸುತ್ತಿದ್ದರೆ, ದೇಹದಲ್ಲಿ ಫ್ಯಾಟ್ ಸೆಲ್‌ಗಳನ್ನು ಕಡಿಮೆ ಮಾಡಿ ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ರೋಗಿ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
ಪೇರ್ ಹಣ್ಣು
ಪೇರ್ ಹಣ್ಣುಗಳು ಸೂಪರ್ ಫುಡ್‌ಗಳಲ್ಲೊಂದು, ಇದರಿಂದ ಹೃದಯಾಘಾತದ ಸಮಸ್ಯೆಯಿಂದ ದೂರ ಉಳಿಯಬಹುದು. ನೀರಿನಂಶ ಹೆಚ್ಚಿರುವ ಕಾರಣ ತುಂಬಾ ಸಮಯ ಹೊಟ್ಟೆ ತುಂಬಿದೆ ಎಂದೇ ಅನಿಸುತ್ತದೆ.
ಚಕ್ಕೆ
ಮಸಲಾ ಪದಾರ್ಥಗಳಲ್ಲಿ ಭಾರತದ ಪಾಕಶಾಲೆಯಲ್ಲಿ ಸಾಕಷ್ಟು ಮಹತ್ವವಿದೆ. ಊಟದಲ್ಲಿ ಚಕ್ಕೆ ಬಳಕೆಯಿಂದ ತೂಕ ಇಳಿಯುತ್ತದೆ.
ಗ್ರೀನ್ ಟೀ
ಗ್ರೀನ್ ಟೀ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ಮೊದಲಿನಿಂದಲೂ ರೂಕ ಇಳಿಕೆಗೆ ಗ್ರೀನ್ ಟೀ ಸಹಕಾರಿ ಎಂದು ಹೇಳಲಾಗುತ್ತದೆ. ಫ್ಯಾಟ್ ಬರ್ನ್‌ಗೆ ಗ್ರೀನ್ ಟೀ ಸಹಾಯಕ.
ಕಾಫಿ
ಕಾಫಿ ಪ್ರಿಯರಾಗಿದ್ದರೆ ಈ ಸುದ್ದಿ ನಿಮಗೆ ಇನ್ನಷ್ಟು ಖುಷಿ ಕೊಡಬಹುದು, ಕಾಫಿಯ ಸೇವನೆಯಿಂದ ತೂಕ ಇಳಿಕೆಯಾಗಿ ಫ್ಯಾಟ್ ಬರ್ನ್ ಆಗುತ್ತದೆ.