ಹೊಸದಿಗಂತ ವರದಿ ಹುಬ್ಬಳ್ಳಿ:
ಕಾಂಗ್ರೆಸ್‌ನಲ್ಲಿ ಪ್ರಸ್ತುತವಾಗಿ ನಡೆಯುತ್ತಿರುವ ಘಟನಾವಳಿಗಳ ನೋಡಿದರೆ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಅನಿಸುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್ ಸರ್ಕಾರ ಬಿಳಲಿದೆ ಎಂಬ ಟ್ವಿಟ್ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ರಾಜಕಾರಣಿಯಾಗಿದ್ದಾರೆ. ಡಿಸಿಎಂ ಸ್ಥಾನಕ್ಕೆ ಇನ್ನೂ ನಾಲ್ವರನ್ನು ತಯಾರು ಮಾಡಿದ್ದಾರೆ. ಅದು ಅಸಾಧ್ಯ.
ಪಕ್ಷಕ್ಕಾಗಿ ಬೇರೆ ಅವರು ದುಡಿದಿದ್ದಾರೆ ಎಂದರು.
ಸರ್ಕಾರ ಕೆಡುವ ವಿಚಾರ ನಾವು ಮಾಡಿಲ್ಲ. ಬರಗಾಲ, ವಿದ್ಯುತ್ ದೊಡ್ಡ ಪ್ರಮಾಣದಲ್ಲಿ ಕೊರತೆಯಾದರೂ ಸರ್ಕಾರ ಗಮನ ಹರಿಸುತ್ತಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಹುಲಿ ಉಗುರು ವಿಚಾರ ಮುನ್ನೆಲೆಗೆ ತರಲಾಗಿದೆ ಎಂದು ಆರೋಪಿಸಿದರು. ವಿರೋಧ ಪಕ್ಷದ ನಾಯಕರ ಸ್ಥಾನ ಹೈಕಮಾಂಡ ಸದ್ಯದಲೇ ಆಯ್ಕೆ ಮಾಡಲಿದೆ. ಕುಮಾರ ಸ್ವಾಮಿ ವಿರೋಧ ಪಕ್ಷದ ನಾಯಕಾರುತ್ತಾರೆ ಎಂಬುವುದು ಸುಳ್ಳು. ಅವರು ಬೇರೆ ಪಕ್ಷದಲ್ಲಿ ಇದ್ದಾರೆ. ನಮ್ಮ ಪಕ್ಷದಲ್ಲಿ ಅತೀ ಹೆಚ್ಚು ಶಾಸಕರಿದ್ದು, ವಿರೋಧ ಪಕ್ಷದ ಸ್ಥಾನಕ್ಕೆ ನಮಗೆ ಅರ್ಹತೆ ಇದೆ ಎಂದು ಹೇಳಿದರು.